ಥಾಣೆ: ದೇಶದ ನಾಗರಿಕರೆಂದು ಗುರುತಿಸಿಕೊಳ್ಳಲು ಯಾವುದೇ ದಾಖಲೆಗಳಿಲ್ಲ 9 ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಲೀಂ ಅಮೀನ್ ಶೇಖ್(30), ರಸಲ್ ಅಬುಲ್ ಹಸನ್ ಶೇಖ್ (27), ಮೊಹಮ್ಮದ್ ಶೇನ್ ಮೊಹಮ್ಮದ್ ಅಕ್ಬರಲೈ ಶೇಖ್(24), ಮೊಹಮ್ಮದ್ ಮಸೂಮ್ ಶೀದುಲ್ಲಾ ಇಸ್ಲಾಂ(21), ತರುಣ್ಮಣಿರಾಮ್ ತ್ರಿಪುರ (21), ಸುಮನ್ ಮಣಿರಾಮ್ ತ್ರಿಬುಪ್ರಾ (25), ಇಸ್ಮಾಯಿಲ್ ಅಬು ತಾಹಿರ್ ಖಾನ್ (19), ಅಜಮ್ ಯೂಸುಫ್ ಖಾನ್ (19) ಮತ್ತು ಮೊಹಮ್ಮದ್ ಅಮೀರ್ ಅಬು ಸೂಫಿಯಾ ಖಾನ್ (26) ಎಂದು ಗುರುತಿಸಲಾಗಿದೆ.
ಸಾರಾವಳಿ ಕೈಗಾರಿಕಾ ಎಸ್ಟೇಟ್‌ನ ಜವಳಿ ಘಟಕದಲ್ಲಿ ಉದ್ಯೋಗಿಯಾಗಿದ್ದ ಆರೋಪಿಗಳ ವಿರುದ್ಧ ಭಾರತೀಯ ಪಾಸ್‌ಪೋರ್ಟ್ ಕಾಯ್ದೆ ಮತ್ತು ವಿದೇಶಿ ಪ್ರಜೆಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಂಗಾವ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಹೇಳಿದ್ದಾರೆ.ಖಚಿತ ಮಾಹಿತಿ ಮೇರೆಗೆ ಪೊಲೀಸರು ಗುರುವಾರ ತಡರಾತ್ರಿ ಸಾರಾವಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
19/11/2021 04:25 pm