ನವದೆಹಲಿ: ಕೇವಲ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಕ್ಯಾಬ್ ಚಾಲಕನ ಮೇಲೆ ಹಿಗ್ಗಾ-ಮುಗ್ಗಾ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ರಾಷ್ಟ್ರದ ರಾಜಧಾನಿ ನವದೆಹಲಿಯ ಪಶ್ಚಿಮ ಪಟೇಲ್ ನಗರದ ಕಸ್ತೂರಿ ಲಾಲ್ ಆನಂದ್ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಇನ್ನೊಬ್ಬ ಮಹಿಳೆಯೊಂದಿಗೆ ಸ್ಕೂಟಿಯಲ್ಲಿ ಬಂದ ಆರೋಪಿ ಮಹಿಳೆ ಸಿಗ್ನಲ್ ನಲ್ಲಿ ಮುಂದೆ ಸಾಗಲು ಸೈಡ್ ಕೊಡುವಂತೆ ಕ್ಯಾಬ್ ಚಾಲಕನಿಗೆ ಕೇಳಿದ್ದಾಳೆ. ರಸ್ತೆ ಕಿರಿದಾಗಿದ್ದು ಸೈಡ್ ಕೊಡಲು ಆಗದು ಎಂದು ಕ್ಯಾಬ್ ಚಾಲಕ ಹೇಳಿದ್ದೇ ತಡ, ಕುಪಿತಗೊಂಡ ಮಹಿಳೆ ಚಾಲಕನ ಮೇಲೆ ಹಿಗ್ಗಾ-ಮುಗ್ಗಾ ಹಲ್ಲೆ ಮಾಡಿದ್ದಾಳೆ. ಇದನ್ನು ಪ್ರಶ್ನಿಸಿದ ಸ್ಥಳೀಯರಿಗೂ ಈಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸ್ಕೂಟಿ ನಂಬರ್ ನ ಆಧಾರದ ಮೇಲೆ ಹಲ್ಲೆಗೈದ ಆರೋಪಿ ಮಹಿಳೆಯನ್ನು ಬಂಧಿಸಲು ಪೊಲೀಸರು ಶೋಧ ನಡೆಸಿದ್ದಾರೆ.
PublicNext
17/11/2021 10:51 pm