ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಕು ನಾಯಿಯಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಚಿತ್ರದುರ್ಗ: ನೆರೆ ಮನೆಯವರು ಸಾಕಿದ ನಾಯಿ ಪಕ್ಕದ ಮನೆಯವರ ಮನೆಯ ಮುಂದೆ ಬಹಿರ್ದೆಸೆ ಮಾಡಿದ್ದಕ್ಕೆ ನಾಯಿ ಸಾಕಿದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟದಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಸ್ವಾಮಿ ಎಂಬ ವ್ಯಕ್ತಿಯು ತಮ್ಮ ಸಾಕು ನಾಯಿಯನ್ನು ಬಹಿರ್ದೆಸೆಗೆ ಕರೆದೊಯ್ಯತಿದ್ದ ವೇಳೆ ನಮ್ಮ ಮನೆ ಮುಂದೆ ನಿಮ್ಮ ನಾಯಿ ಗಲೀಜು ಮಾಡಿಸಬೇಡ. ನಮಗೆ ದುರ್ವಾಸನೆ ಬರುತ್ತದೆ ಅಂತ ಮಹಂತೇಶ ಎಂಬವರ ಕುಟುಂಬಸ್ಥರು ಹೇಳಿದ್ದಾರೆ. ಈ ವೇಳೆ ಸ್ವಾಮಿ ಮತ್ತು ನೆರೆಮನೆಯವರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದು ಜಗಳಕ್ಕೆ ಕಾರಣವಾಗಿ ಮಹಂತೇಶ ಎಂಬ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ.

ಜಗಳ ಮಾಡುತ್ತಿದ್ದಾಗ ಸ್ವಾಮಿ ಮರದ ತುಂಡಿನಿಂದ ಜಾಲಿಕಟ್ಟೆ ನಿವಾಸಿ ಮಹಂತೇಶ್ (23) ತಲೆಗೆ ಬಲವಾಗಿ ಹೊಡೆದಿದ್ದಾನೆ. ಚಿಕಿತ್ಸೆ ಫಲಿಸದೇ ಮಹಂತೇಶ್ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಇನ್ನು ತಮ್ಮ ಮಗನ ಸಾವಿನಿಂದ ಮನನೊಂದಿರುವ ಮಹಂತೇಶ್ ಕುಟುಂಬಸ್ಥರು ಗ್ರಾಮದ ಸ್ವಾಮಿ & ಪತ್ನಿ ಕಮಲಮ್ಮ ವಿರುದ್ಧ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

17/11/2021 06:14 pm

Cinque Terre

42.51 K

Cinque Terre

1

ಸಂಬಂಧಿತ ಸುದ್ದಿ