ತುಮಕೂರು: ಇಲ್ಲಿಯ ಗ್ರಾಮಾಂತರದ ನಾಗವಲ್ಲಿಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ಬ್ಯಾಂಕ್ ನ ವಾಚ್ ಮ್ಯಾನ್ ಸಿದ್ದಪ್ಪ ರನ್ನ ಕೊಲೆಗೈದು ದರೋಡೆ ಮಾಡಲಾಗಿದೆ.
ಸಿದ್ದಪ್ಪ (55) ಕೊಲೆ ಆದ ದುರ್ದೈವಿ. ಕಳೆದ ರಾತ್ರಿ 9:30ರ ಸುಮಾರಿಗೆ ನಾಗವಲ್ಲಿಯಲ್ಲಿ ಈ ಘಟನೆ ನಡೆದಿದೆ. ಸೊಸೈಟಿಯಲ್ಲಿದ್ದ ಹಣ ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಪುರ್ ವಾಡ್ , ಎಎಸ್ ಪಿ ಉದೇಶ್ ಭೇಟಿ ನೀಡಿದ್ದು ಶ್ವಾನ ದಳದಿಂದ ಕೂಡ ಸುಳಿವು ಪತ್ತೆ ಹಚ್ಚುವ ಕೆಲಸ ಮುಂದುವರಿದಿದೆ.
PublicNext
15/11/2021 06:49 pm