ಮುಂಬೈ: ಕಳ್ಳನೋರ್ವ ರಾತ್ರೋರಾತ್ರಿ ಆಂಜನೇಯ ದೇವಸ್ಥಾನಕ್ಕೆ ನುಗ್ಗಿ ಹುಂಡಿಯನ್ನು ಎತ್ತಿಕೊಂಡು ಓಡಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಕಳ್ಳತನದ ದೃಶ್ಯವು ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೊದಲಿಗೆ ದೇವಾಲಯವನ್ನು ಪ್ರವೇಶಿಸಿದ ಯುವಕ ಅತ್ತ ಇತ್ತ ನೋಡಿದ್ದಾನೆ. ಮೊಬೈಲ್‌ನಿಂದ ದೇವರ ಫೋಟೋಗಳನ್ನು ತೆಗೆದುಕೊಳ್ಳುವಂತೆ ನಾಟಕವಾಡಿದ್ದಾನೆ. ಹಾಗೆ ಗಮನಿಸುತ್ತಾ ದೇವರಿಗೆ ನಮಸ್ಕಾರ ಮಾಡಿದ್ದಾನೆ. ಮತ್ತೆ ಅತ್ತಿತ್ತ ನೋಡಿದ್ದಾನೆ. ಯಾರೂ ಇಲ್ಲ ಎಂದು ತಿಳಿಯುತ್ತಿದ್ದಂತೆಯೇ ಆಂಜನೇಯನ ವಿಗ್ರಹಕ್ಕೆ ನಮಸ್ಕಾರ ಮಾಡಿ ಹುಂಡಿಯನ್ನು ಕದ್ದು ಪರಾರಿಯಾಗಿದ್ದಾನೆ.
ಹುಂಡಿಯಲ್ಲಿ ಒಂದು ಸಾವಿರ ರೂಪಾಯಿ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಹೊರಗಡೆ ಕೂಡ ಇನ್ನೋರ್ವ ಇದ್ದುದು ಕಂಡುಬಂದಿದೆ. ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾದ್ದರಿಂದ ಇಬ್ಬರೂ ಖದೀಮರು ಸಿಕ್ಕಿಬಿದ್ದಿದ್ದಾರೆ.
PublicNext
15/11/2021 01:38 pm