ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣಕ್ಕಾಗಿ ಬಾಮೈದನನ್ನೇ ಕೊಲೆಗೈದ ಕ್ರೂರಿ ಬಾವ

ಬಾಗಲಕೋಟೆ: ಆಲಮಟ್ಟಿ ಜಲಾಶಯ ಮುಳುಗಡೆ ಆಸ್ತಿ ಪರಿಹಾರದ ಹಣಕ್ಕಾಗಿ ನಡೆದಿದ್ದ ಜಗಳದಲ್ಲಿ ಬಾವ ತನ್ನ ಬಾಮೈದುನನ್ನೇ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

ವೀರೇಶ್ ಹಡಗಲಿಮಠ (24) ಕೊಲೆಯಾದ ಯುವಕ. 30 ಲಕ್ಷ ರೂ. ಪರಿಹಾರ ಹಣದಲ್ಲಿ ಪಾಲು ಬೇಕೆಂದು ಅಕ್ಕ ಮಧುಶ್ರೀ ಮತ್ತು ಬಾವ ಅವಧೂತ ಒತ್ತಾಯ ಮಾಡುತ್ತಿದ್ದರು. ಬಾಗಲಕೋಟೆಯ ನವನಗರದ 63ನೇ ಸೆಕ್ಟರ್​​ನಲ್ಲಿ ವಾಸವಾಗಿದ್ದ ವೀರೇಶ್​ ಮನೆಗೆ ಶುಕ್ರವಾರ ಸಂಜೆ ಬಾವ ಅವಧೂತ ಮತ್ತು ಸಹಚರರು ನುಗ್ಗಿ ಚಾಕುವಿನಿಂದ ಇರಿದು ಗಂಭೀರವಾಗಿ ಘಾಸಿಗೊಳಿಸಿದ್ದಾರೆ. ಈ ವೇಳೆ ವೀರೇಶ್ ಜತೆ ಇದ್ದ ಸ್ನೇಹಿತ ಸುಹಾಸ್​​ಗೂ ಗಾಯವಾಗಿದೆ. ವೀರೇಶ್​​ನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ನಡೆದ ಸ್ಥಳಕ್ಕೆ ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವೀರೇಶ್ ಹಡಗಲಿಮಠನಿಗೆ ತಂದೆ-ತಾಯಿ ಇರಲಿಲ್ಲ. ನವನಗರದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಅಕ್ಕ ಮಧುಶ್ರೀಗೆ ಕಳೆದ ನಾಲ್ಕು ವರ್ಷದ ಹಿಂದೆ ಮದುವೆ ಆಗಿತ್ತು ಎನ್ನಲಾಗಿದೆ.

Edited By : Vijay Kumar
PublicNext

PublicNext

13/11/2021 10:52 pm

Cinque Terre

30.75 K

Cinque Terre

1