ಚಿಕ್ಕಮಗಳೂರು : ನಮ್ಮೂರಿಗೆ ಬಾರ್ ಬೇಡ, ದುಡಿದ ಹಣವನ್ನೆಲ್ಲ ಬಾರ್ ಗೆ ಹೋಗಿ ಗಂಡಸರು ಹಾಕಿದರೆ ನಾವೇನು ತಿನ್ನಬೇಕು ಹೊಟ್ಟೆಗೆ. ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು ಯಾರು ನೋಡಿಕೊಳ್ಳುತ್ತಾರೆ ಎಂದು ರೊಚ್ವಿಗೆದ್ದ ಮಹಿಳೆಯರು ಬಾರ್ ಅನ್ನು ಪುಡಿ-ಪುಡಿ ಮಾಡಿರುವ ಘಟನೆ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.
30ಕ್ಕೂ ಹೆಚ್ಚು ಮಹಿಳೆಯರು ಬಾರ್ ನಲ್ಲಿದ್ದ ಕುರ್ಚಿಗಳನ್ನ ಮನಸ್ಸೋ ಇಚ್ಛೆ ಪುಡಿ ಮಾಡಿದ್ದಾರೆ. ಸ್ಥಳೀಯರ ವಿರೋಧದ ಮಧ್ಯೆಯೂ ಬಾರ್ ಓಪನ್ ಮಾಡಲಾಗಿತ್ತು.ಇದೀಗ ಊರಿನ ಹೆಂಗಳೆಯರು ಬಾರ್ ಗೆ ನುಗ್ಗಿ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎಂದು ತೋರಿಸಿಕೊಟ್ಟಿದ್ದಾರೆ.
PublicNext
13/11/2021 04:45 pm