ಬೆಳಗಾವಿ : ಡ್ರಗ್ಸ್,ಗಾಂಜಾ,ಕಳ್ಳತನ ಪ್ರಕರಣಗಳ ಮಧ್ಯೆ ಗಡಿ ಜಿಲ್ಲೆಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಕಂಟ್ರಿ ಪಿಸ್ತೂಲ್ ದಂಧೆ.
ಹೌದು ಮೂರು ರಾಜ್ಯಗಳ ಗಡಿಯಲ್ಲಿ ಕಂಟ್ರಿ ಪಿಸ್ತೂಲ್ ದಂಧೆ ನಡೆಯುತ್ತಿದ್ದು,ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಕ್ಕೂ ಮಧ್ಯಪ್ರದೇಶದಿಂದಲೇ ಪಿಸ್ತೂಲ್ ಪೂರೈಕೆಯಾಗುತ್ತಿವೆ. ಇನ್ನು ಶಾಕಿಂಗ್ ಸಂಗತಿ ಅಂದ್ರೆ ಕಂಟ್ರಿ ಪಿಸ್ತೂಲ್ ತಯಾರಾಗುವುದೇ ಮಧ್ಯಪ್ರದೇಶದಲ್ಲಿಒಂದು ಲಕ್ಷ ರೂ.ಕೊಟ್ಟರೇ ಸಾಕು ಯಾರು ಬೇಕಾದರೂ ಈ ಕಂಟ್ರಿ ಪಿಸ್ತೂಲ್ ಪಡೆಯುವಂತ್ತಾಗಿದೆ.
ಸದ್ಯ ಕಂಟ್ರಿ ಪಿಸ್ತೂಲ್ ದಂಧೆ ಕೋರರ ಬೆನ್ನು ಬಿದ್ದ ಬೆಳಗಾವಿ ಜಿಲ್ಲಾ ಪೊಲೀಸರು, ಖಾನಾಪುರ ಪೊಲೀಸರಿಂದ ಎರಡು ಕಂಟ್ರಿ ಪಿಸ್ತೂಲ್, ಮೂರು ಜೀವಂತ ಗುಂಡು ಜಪ್ತಿ ಮಾಡಿದ್ದಾರೆ ಇನ್ನು ಖಾನಾಪುರ ಇನ್ಸ್ಪೆಕ್ಟರ್ ಸಿಂಗೆ ನೈಟ್ ರೌಂಡ್ಸಗೆ ಹೋದಾಗ ಆಕಸ್ಮಿಕವಾಗಿ ಪಿಸ್ತೂಲ್ ಖದಿಮರು ತಗಲಾಕಿಕೊಂಡಿದ್ದಾರೆ.
ಕರ್ನಾಟಕದ ಐವರು, ಮಹಾರಾಷ್ಟ್ರದ ಮೂವರು, ಮಧ್ಯಪ್ರದೇಶದ ಇಬ್ಬರು ಸೇರಿ ಒಟ್ಟು 9 ಜನರ ಮೇಲೆ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ರೌಡಿಶೀಟರ್ ಸೇರಿ 8 ಜನರನ್ನು ಬಂಧಿಸಲಾಗಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಉಮೇಶ ಬೆಳೆಯಲಿ ಪಿಸ್ತೂಲ್ ಖರೀದಿಸಲು ಆಗಮಿಸಿದ್ದ,ಮಹಾರಾಷ್ಟ್ರ ದ ಕೊಲ್ಲಾಪುರ ಜಿಲ್ಲೆ ತುಳಸಿದಾಸ ಜೋಶಿ ಕರ್ನಾಟಕ, ಗೋವಾ ರಾಜ್ಯದಲ್ಲಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡುವ ಕಿಂಗ್ ಫಿನ್.
ತುಳಸಿದಾಸಗೆ ಪಿಸ್ತೂಲ್ ಪೂರೈಸುತ್ತಿದ್ದ ಮಧ್ಯಪ್ರದೇಶದ ವರ್ಣಾ ಜಿಲ್ಲೆಯ ವಿಜಯ ರಾಮಲಾಲ್ ಠಾಕೂರ್ ಕೂಡಾ ಅರೆಸ್ಟ್ ಆಗಿದ್ದು,ಇನ್ನೊಬ್ಬ ಮಧ್ಯಪ್ರದೇಶ ಮೂಲದ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ರೌಡಿಶೀಟರ್ ಉಮೇಶ್ ಪಿಸ್ತೂಲ್ ಇಟ್ಟುಕೊಂಡು ಜನರನ್ನು ಬೆದರಿಸುವುದಕ್ಕಾಗಿ ಪಿಸ್ತೂಲ್ ಖರೀದಿಗೆ ಬಂದು ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಕಂಟ್ರಿ ಪಿಸ್ತೂಲ್ ದಂಧೆಕೋರರ ಮೇಲೆ ಬೆಳಗಾವಿ ಜಿಲ್ಲಾ ಪೊಲೀಸರು ಹೆಚ್ಚು ನಿಗಾ ವಹಿಸಿದ್ದಾರೆ.
PublicNext
13/11/2021 12:25 pm