ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಟುಡಿಯೋದಲ್ಲಿ ನಗದು ಕಳವು; ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳನ 'ಕರಾಮತ್ತು'

ಕುಂದಾಪುರ: ಕುಂದಾಪುರದ ಬಸ್ ನಿಲ್ದಾಣ ಸಮೀಪ ಮುಖ್ಯರಸ್ತೆಯಲ್ಲಿರುವ ಸೈಂಟ್ ಅಂತೋನಿ ಸ್ಟುಡಿಯೋದಲ್ಲಿ ಕಳ್ಳನೊಬ್ಬನ ಕಳ್ಳತನದ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಿನ್ನೆ ತಡರಾತ್ರಿ ಈ ಕಳ್ಳತನ ನಡೆದಿದ್ದು, ರಾತ್ರಿ ಸುಮಾರು 12.30ರ ಸುಮಾರಿಗೆ ಸ್ಟುಡಿಯೋದ ಹಿಂಬದಿ ಮೇಲ್ಛಾವಣಿಯ ಹೆಂಚು ಸರಿಸಿ, ಒಳ ಪ್ರವೇಶಿಸಿದ ಕಳ್ಳ ಡ್ರಾವರ್ ನಲ್ಲಿದ್ದ 2 ಸಾವಿರದಷ್ಟು ನಗದು ಹಾಗೂ ಒಂದೆರಡು ಪೆನ್ ಡ್ರೈವ್ ಎಗರಿಸಿದ್ದಾನೆ. ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡೊಂದನ್ನು ಮಾಡಿನ ಮೇಲೆ ಬಿಟ್ಟು ಹೋಗಿದ್ದಾನೆ.

ಸ್ಟುಡಿಯೋದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಚಲನವಲನ ದಾಖಲಾಗಿದ್ದು, ಮೇಲ್ನೋಟಕ್ಕೆ ಪಕ್ಕದಲ್ಲಿರುವ ವೈನ್ ಶಾಪ್ ಗೆ ಬರುವ ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೆಂದು ಸಂಶಯಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

Edited By : Nagesh Gaonkar
PublicNext

PublicNext

10/11/2021 10:17 pm

Cinque Terre

66.08 K

Cinque Terre

1

ಸಂಬಂಧಿತ ಸುದ್ದಿ