ರಾಮನಗರ: ಕಾಲ ಎಷ್ಟೇ ಬದಲಾದರೂ ಇನ್ನು ಕೆಲವರು ಮೂಢನಂಬಿಕೆಯಿಂದ ಕೆಲವು ಅಹಿತಕರ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ.ಸದ್ಯ ನಿಧಿ ಶೋಧಕ್ಕಾಗಿ ನಿಧಿ ಭೂಮಿಯಿಂದ ತನ್ನಿಂದ ತಾನೇ ಮೇಲೆ ಬರಲು ಮಹಿಳೆಯರು ಪೂರ್ಣ ಬೆತ್ತಲಾಗಿ ಪೂಜಾ ವಿಧಾನಗಳನ್ನು ನೆರವೇರಿಸಬೇಕಂತೆ..! ಇಂತಹ ಅಮಾನವೀಯ ಘಟನೆಯನ್ನು ಸಾತನೂರು ಪೊಲೀಸರು ಬೇಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿದ್ದು, ಮೌಢ್ಯ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದವರಾದ ಪಾರ್ಥ ಸಾರಥಿ, ನಾಗರಾಜು, ಶಶಿಕುಮಾರ್, ಲೋಕೇಶ್, ಮೋಹನ್, ಲಕ್ಷ್ಮೀ ನರಸಪ್ಪ ಎಂಬುವರನ್ನು ಬಂಧಿಸಲಾಗಿದ್ದು, ಪೂಜೆ ನೆಪದಲ್ಲಿ ಬಲಿಯಾಗುತ್ತಿದ್ದ ಕೂಲಿ ಕಾರ್ಮಿಕೆ ಸುಜಾತಾ ಎಂಬುವವರನ್ನು ರಕ್ಷಿಸಲಾಗಿದೆ.
PublicNext
10/11/2021 06:45 pm