ಬಳ್ಳಾರಿ: ತಾನೊಬ್ಬ ಮುಸ್ಲಿಂ, ಅವಿವಾಹಿತ ಎಂದು ಬಳ್ಳಾರಿ ಸಬ್ ರಿಜಿಸ್ಟ್ರಾರ್ ನನ್ನನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿ, ನಂತರ ಮಗುವಾದ ಮೇಲೆ ಪರಾರಿಯಾಗಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಎಂದು ಸಂತ್ರಸ್ತ ಮುಸ್ಲಿಂ ಯುವತಿ ಮಗುವನ್ನು ಹಿಡಿದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬಳ್ಳಾರಿ ಸಬ್ ರಿಸ್ಟ್ರಾರ್ ಉಮೇಶ್ ವಿರುದ್ಧ ಮುಸ್ಲಿಂ ಯುವತಿ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. "ಉಮೇಶ್ ತಮ್ಮ ಹೆಸರನ್ನು ರೆಹಾನ್ ಅಹಮದ್ ಎಂದು ಹೇಳಿಕೊಂಡು ನನ್ನನ್ನು ನಂಬಿಸಿದರು. ತಾವು ಮೊದಲೇ ಮದುವೆಯಾಗಿರುವ ವಿಷಯ ಕೂಡ ಹೇಳಿರಲಿಲ್ಲ. ಅವರನ್ನು ನಾನು ನಂಬಿದೆ. ಅವರ ಪತ್ನಿ ಹಾಗೂ ಮಕ್ಕಳ ಜತೆ ನಾನು ನೋಡಿದ್ದೆ. ಆಗ ಆಕೆ ತನ್ನ ಅತ್ತಿಗೆ ಹಾಗೂ ಅವರ ಮಕ್ಕಳೆಂದು ಉಮೇಶ್ ಪರಿಚಯಿಸಿದ್ದರು" ಎಂದು ಯುವತಿ ದೂರಿದ್ದಾರೆ.
ಯುವತಿ ದೂರು ನೀಡುವ ಮುನ್ನವೇ ಉಮೇಶ್ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು. 'ಯುವತಿಯು ಮೊದಲು ಪಬ್‌ನಲ್ಲಿ ಮಾಡೆಲ್ ಆಗಿದ್ದಳು. ಅಲ್ಲಿ ನನಗೆ ಪರಿಚಯವಾಯಿತು. ನನ್ನ ಬಳಿ ಒಂದು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಳು. ನಂತರ ನಿಮ್ಮ ಸಹಾಯಕ್ಕೆ ನನ್ನ ಬಳಿ ಕೊಡಲು ದೇಹ ಬಿಟ್ಟು ಬೇರೆ ಏನು ಇಲ್ಲ, ದೇಹ ಕೊಟ್ಟು ಉಪಕಾರ ಮಾಡಬಲ್ಲೆ ಎಂದಿದ್ದಳು. ನನ್ನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ನಂತರ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋಗಳನ್ನು ಯುಟ್ಯೂಬ್ ಹಾಕುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದಾಳೆ. ಈಕೆಯ ಜತೆಗೆ ಯುವತಿ ಹಾಗೂ ಅವರ ಕುಟುಂಬ ಸದಸ್ಯರಾದ ಇಸ್ಮಾಯಿಲ್, ಜರೀನಾ, ಮಹಮದ್ ತಲೀಬ್ ಸೇರಿ 33.5 ಲಕ್ಷ ರೂ. ಸುಲಿಗೆ ಮಾಡಿದ್ದಾರೆ ಎಂದು ಉಮೇಶ್ ದೂರಿನಲ್ಲಿ ತಿಳಿಸಿದ್ದಾರೆ. ಆದ್ದರಿಂದ ಇದರ ಸತ್ಯಾಸತ್ಯತೆಯ ಬಗ್ಗೆ ಬಳ್ಳಾರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
10/11/2021 05:00 pm