ಬೆಂಗಳೂರು: ಬೆಂಗಳೂರಿನ ಜನ ನಿಬಿಡ ಪ್ರದೇಶ ಮೈಸೂರು ರಸ್ತೆಯಲ್ಲಿನ ರಚನಾ ಪೆಟ್ರೋಲ್ ಬಂಕ್ ನಲ್ಲಿ ಪುಡಿ ರೌಡಿಯೊಬ್ಬ ಹಾಡಹಗಲೇ ಮಚ್ಚು ಹಿಡಿದು ರಾಬರಿಗೆ ಯತ್ನಿಸಿದ್ದಾನೆ.
ಅಡ್ರೆಸ್ ಕೇಳುವ ನೆಪದಲ್ಲಿ ಬಂದಿದ್ದ ಆಗಂತುಕ ಪೆಟ್ರೋಲ್ ಬಂಕ್ ಕ್ಯಾಶಿಯರ್ ಸಿಬ್ಬಂದಿಯನ್ನ ಗುರಿಯಾಗಿಸಿ ಮಚ್ಚು ಬೀಸಿದ್ದಾನೆ. ಕ್ಯಾಶಿಯರ್ ನಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಹಲವು ಬಾರಿ ಯತ್ನಿಸಿದ್ದಾನೆ. ಲಾಂಗ್ ಬೀಸಿದ್ರೂ ಬಂಕ್ ಕ್ಯಾಶಿಯರ್ ಕ್ಯಾಶ್ ಬ್ಯಾಗ್ ಬಿಟ್ಟಿಲ್ಲ. ಕೊನೆಗೆ ರಸ್ತೆಯಲ್ಲಿ ಎಳೆದಾಡುವಾಗ ಉಳಿದ ಸಿಬ್ಬಂದಿ ಕಲ್ಲು ತೂರಿದ್ದರಿಂದ ಕೂಡಲೇ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ.
ಘಟನೆ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಶಯಾಸ್ಪದ ವ್ಯಕ್ತಿಯನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
PublicNext
10/11/2021 04:30 pm