ಉತ್ತರ ಪ್ರದೇಶ: ವೈದ್ಯರನ್ನ ದೇವರಿಗೆ ಹೋಲಿಸುತ್ತಾರೆ. ಆ ದೇವರೆ ಅತ್ಯಾಚಾರ ಎಸಗಿದರೇ ಹೇಗೆ ? ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ.
ಉತ್ತರ ಪ್ರದೇಶದ ಸೈದ್ಪುರ ಬಳಿಯ ದಂತ ವೈದ್ಯ ತನ್ನ ಕ್ಲಿನಿಕ್ ಗೆ ಬಂದಿದ್ದ 32 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹಲ್ಲು ತೆಗೆಸಲು ಕ್ಲಿಕ್ ಗೆ ಬಂದಿದ್ದ ಮಹಿಳೆಯನ್ನ ಮೊದಲು ಚೆಕಪ್ ಮಾಡಿದ್ದಾನೆ. ಮತ್ತೊಂದು ದಿನ ಬರಬೇಕು ಅಂತಲೂ ಹೇಳಿದ್ದಾನೆ. ಆ ಮಹಿಳೆ ಇಲ್ಲಿಗೆ ಬಂದಾಗ, ಹಲ್ಲು ಕೀಳೋವಾಗ ನೋವಿನ ಅನುಭವ ಆಗದಿರಲೆಂದು ಇಂಜೆಕ್ಷನ್ ಮಾಡೋದಾಗಿ ಹೇಳಿದ್ದಾನೆ.
ಆದರೆ ಆತ ಮಾಡಿದ್ದು ಪ್ರಜ್ಞೆ ತಪ್ಪಿಸೋ ಇಂಜೆಕ್ಷನ್. ಇದನ್ನ ಮಾಡಿಯೇ ಆ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ.ಅತ್ಯಾಚಾರ ಎಸಗಿರೋದನ್ನು ವೀಡಿಯೋ ಮಾಡಿ ಹೆದರಿಸಿದನಂತೆ. ಆದರೆ ಈ ಬಗ್ಗೆ ಪತಿಗೆ ಪತ್ನಿ ತಡವಾಗಿಯೇ ಹೇಳಿದ್ದಾರೆ.ಹಾಗಾಗಿಯೇ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಈಗ ದಾಖಲಾಗಿದೆ.
PublicNext
09/11/2021 08:38 pm