ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗು ಮಾರಾಟದ ಆರೋಪ,ಮರ್ಯಾದೆಗೆ ಅಂಜಿ ಆತ್ಮಹತ್ಯೆ

ಕೋಲಾರ: ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದು ಅದರಲ್ಲಿ ನಾಲ್ವರು ಸಾವನ್ನಪ್ಪಿ ಒಬ್ಬಾಕೆ ತೀವ್ರ ನಿಗಾ ಘಟಕದಲ್ಲಿ

ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮುನಿಯಪ್ಪ(75), ನಾರಾಯಣಮ್ಮ(70) ಬಾಬು(45) ಗಂಗೋತ್ರಿ (17)ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದವರು. ಮೃತ ಮುನಿಯಪ್ಪನ ಪುತ್ರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಮುನಿಯಪ್ಪನ ಪುತ್ರಿ ಪುಷ್ಪ ವಿರುದ್ಧ ಬೇರೆಯೊಬ್ಬರ ಮಗುವನ್ನು ಮಾರಾಟ ಮಾಡಿದ ಆರೋಪವಿದ್ದು, ಪೋಲಿಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದರು ಇದರಿಂದ ಬೇಸತ್ತ ಕುಟುಂಬ ಇಂತಹದೊಂದು ದುಡುಕು ನಿರ್ಧಾರ ತೆಗೆದುಕೊಂಡಿದೆ.

ತಂದೆ ,ತಾಯಿ, ಮಗಳು, ಅಳಿಯ ಹಾಗೂ ಮೊಮ್ಮಗಳು ನಿನ್ನೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ನಂತರ ಇವರನ್ನು ಎಸ್ಎನ್ಆರ್ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ ಆದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ನಾಲ್ವರು ಸಾವನ್ನಪ್ಪಿದ್ದಾರೆ.ಇನ್ನು ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

08/11/2021 08:30 pm

Cinque Terre

57.17 K

Cinque Terre

0

ಸಂಬಂಧಿತ ಸುದ್ದಿ