ಕಲಬುರಗಿ: ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ರೌಡಿಶೀಟರ್ ಅಭಿಷೇಕ್ ಬರ್ಬರ ಹತ್ಯೆ ಪ್ರಕರಣದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ನ.4ರಂದು ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ರೌಡಿ ಅಭಿಷೇಕ್‌ನನ್ನು ಹಾಡಹಗಲೇ ಭಯಾನಕವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಗೈದ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿ ಕಲಬುರಗಿ ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ಆರೋಪಿಗಳಾದ ಮುರ್ತುಜಾ ಮೊಹಮ್ಮದ್ ಅಲಿ (25), ಸಾಗರ ಭೈರಾಮಡಗಿ (22), ಆಕಾಶ ಜಾಧವ (22), ಶುಭಂ ದೊಡ್ಡಮನಿ (23), ಅಶೋಕ ಮೂಲಭಾರತಿ (21) ಹಾಗೂ ಕೌಶಿಕ್ ಹಳೆಮನಿ (21) ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಲಾಂಗ್, ಮಚ್ಚು, ಒಂದು ಇನ್ನೋವಾ ಕಾರ್ ಹಾಗೂ ಎರಡು ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಗೀಡಾದ ಅಭಿಷೇಕ ತನ್ನ ಗ್ಯಾಂಗ್ ನೊಂದಿಗೆ ಒಂದುವರೆ ವರ್ಷದ ಹಿಂದೆ ಸಾಗರ ಭೈರಾಮಡಗಿ ಎನ್ನುವ ಯುವಕನ ಮೇಲೆ ನಡೆಸಿದ್ದ ಎನ್ನಲಾಗಿದೆ. ಇದೇ ದ್ವೇಷ ಇಟ್ಟಿದ್ದ ಸಾಗರ್ ಹಾಗೂ ಗ್ಯಾಂಗ್‌ನಿಂದ ಅಭಿಷೇಕನ ಕೊಲೆಯಾಗಿದೆ ಎನ್ನಲಾಗಿದೆ.
ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
PublicNext
08/11/2021 12:17 pm