ಬೆಂಗಳೂರು: ಪತಿಯನ್ನು ಕೊಲೆ ಮಾಡಿದ ಪತ್ನಿ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ. ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಹಾರೋಕ್ಯಾತನಹಳ್ಳಿಯಲ್ಲಿ ಸ್ವಾಮಿ ರಾಜ್ ಹಾಗೂ ಆತನ ಎರಡನೇ ಪತ್ನಿ ಕೊಲೆ ಆರೋಪಿ ನೇತ್ರಾವತಿ ವಾಸವಾಗಿದ್ದರು. ಕೊಲೆಯಾದ ಪತಿ ಸ್ವಾಮಿರಾಜ್ ಪತ್ನಿ ನೇತ್ರಾವತಿಯನ್ನು ಸಂಬಂಧಿಕರ ಜೊತೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಆಕ್ರೋಶಗೊಂಡ ನೇತ್ರಾವತಿ, ಪತಿ ಸ್ವಾಮಿರಾಜ್(50) ಅವರನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ಪತಿಯನ್ನು ಕೊಲೆಮಾಡಿ ನೇತ್ರಾವತಿ ನೇರವಾಗಿ ಮಾದನಾಯಕನಹಳ್ಳಿ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾಳೆ.
ಆಸ್ತಿ ತನ್ನ ಪಾಲು ಮಾಡಿಕೊಳ್ಳಲು ಈ ಕೊಲೆ ನಡೆದಿದೆ ಎಂದು ಕೊಲೆಯಾದ ಸ್ವಾಮಿರಾಜ್ ಅವರ ಮೊದಲ ಪತ್ನಿ ಸತ್ಯಕುಮಾರಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
08/11/2021 08:05 am