ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರದ ಪಶ್ಚಿಮ ವಿಭಾಗದ 6 ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಮನೆಗಳಿಗೆ ಮತ್ತೆ ಲಗ್ಗೆ ಇಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಮಾಗಡಿ ರೋಡ್ ಮತ್ತು ಕೆಪಿ ಅಗ್ರಹಾರ, ಬ್ಯಾಟರಾಯನ ಪುರ, ಕಾಟನ್ ಪೇಟೆ, ಜೆಜೆ ನಗರ, ಚಾಮರಾಜ ಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮನೆಗಳ ಡಿಸಿಪಿ,ಎಸಿಪಿ, ಇನ್ಸ್ಪೆಕ್ಟರ್ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿ ಪುಂಡರಿಗೆ ಚಳಿ ಬಿಡಿಸಿದ್ದಾರೆ. ರೌಡಿ ಶೀಟರ್ ಮತ್ತು ಗಾಂಜಾ ಪೆಡ್ಲರ್ ನಿವಾಸಗಳ ಮೇಲೆ ದಾಳಿ ನಡೆಸಿದ ಪೊಲೀಸರುಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ರೌಡಿ ಶೀಟರ್‌ಗಳಾದ ಲಿಯೋ, ಕಾರ್ತಿಕ್, ಹಿದಾಯತ್, ವಾಸಿಂಪಾಷ, ಡಿಕ್ರಿ ಸಲೀಂ, ಆಯೂಬ್ ಖಾನ್, ವಿನೋದ್, ವೆಂಕಟೇಶ್, ವಿಜಯ್, ಸತೀಶ್ ಸೇರಿದಂತೆ ಹಲವರ ಮನೆ ಮೇಲೆ ದಾಳಿ ನಡೆಸಲಾಗಿದೆ.
PublicNext
07/11/2021 12:19 pm