ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಟಾರ್ ಹೋಟೆಲ್ ರಂಪಾಟ: ಜುವೆಲ್ಲರಿ ಮಾಲೀಕರ ಪುತ್ರ ವಿಷ್ಣು ಭಟ್- ಹ್ಯಾಕರ್ ಶ್ರೀಕಿ ವಿಚಾರಣೆ

ಬೆಂಗಳೂರು:ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ನನ್ನ ಮತ್ತು ಬೆಂಗಳೂರಿನ ಖ್ಯಾತ ಜುವೆಲ್ಲರಿ ಮಾಲೀಕರ ಪುತ್ರ ವಿಷ್ಣು ಭಟ್ ನನ್ನ ಜೀವನ್ ಭೀಮಾನಗರದ ಪೊಲೀಸರು ಕರೆತಂದು ವಿಚಾರಣೆ ಆರಂಭಿಸಿದ್ದಾರೆ.

ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ಹ್ಯಾಕರ್ ಶ್ರೀಕಿಯನ್ನ ನೋಡಲೇಂದೇ ವಿಷ್ಣು ಭಟ್ ಹೋಟೆಲ್ ಗೆ ಕುಡಿದ ಮತ್ತಿನಲ್ಲಿಯೇ ಬಂದಿದ್ದ ರಂಪಾಟವನ್ನೂ ಮಾಡಿದ್ದ.ಇದರಿಂದ ಹೋಟೆಲ್ ಸಿಬ್ಬಂದಿ ದೂರು ನೀಡಿದ್ದರು. ಜೆಬಿ ನಗರದ ಪೊಲೀಸರು ರಾಯಲ್ ಆರ್ಕಿಡ್ ಹೋಟೆಲ್ ಗೆ ಬಂದು ಇಬ್ಬರನ್ನೂಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಹೋಟೆಲ್ ನವರು ಇಬ್ಬರಲ್ಲಿ ಯಾರ ವಿರುದ್ಧ ದೂರು ಕೊಡ್ತಾರೋ ಅವರ ಮೇಲೆ ಮುಂದಿನ ತನಿಖೆ ನಡೆಸೋದಾಗಿಯೇ ಡಿಸಿಪಿ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ. ಅಂದ್ಹಾಗೆ ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಹ್ಯಾಕರ್ ಶ್ರೀಕಿ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ.ಆದರೆ ಎಲ್ಲಿದ್ದಾನೆ ಎಂದು ಯಾರಂದ್ರೆ ಯಾರಿಗೂ ತಿಳಿದಿರಲಿಲ್ಲ. ಈ ಪ್ರಕರಣದಿಂದ ಆತನ ಐಶಾರಾಮಿ ಜೀವನದ ವಿಷಯ ಹೊರಬಿದ್ದಿದೆ.

Edited By :
PublicNext

PublicNext

06/11/2021 10:53 pm

Cinque Terre

43.17 K

Cinque Terre

0

ಸಂಬಂಧಿತ ಸುದ್ದಿ