ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಯಲ್ಲಿ ಬಿದ್ದ ಕ್ರಿಕೆಟ್ ಬಾಲ್ ತೆಗೆಯಲು ಹೋಗಿ ಮೂವರ ದುರ್ಮರಣ

ಆನೇಕಲ್:ಕ್ರಿಕೆಟ್ ಆಡುವಾಗ ಬಾಲ್ ಕೆರೆಗೆ ಬಿದ್ದು, ಅದನ್ನ ತೆಗೆಯಲು ಹೋಗಿ ಮೂವರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಇಗ್ಗಲೂರು ಕೆರೆಯಲ್ಲಿ ನಡೆದಿದೆ.

ಅಮಿತ್ ಕುಮಾರ್(31) ರಿಷಿತೇಷ್( 9) ಧೀಮಂತ್( 13) ಮೃತಪಟ್ಟವರು ಎಂದು ಗುರುತಿಸಲಾಗಿದೆ.ಇವರೆಲ್ಲ ಉತ್ತರ ಭಾರತ ಮೂಲದವರಾಗಿದ್ದು, ಇಗ್ಗಲೂರು ಚಂದ್ರಕಾಂತ್ ಲೇಔಟ್ ನಲ್ಲಿ ವಾಸವಿದ್ದರು.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ,ಮೃತದೇಹಗಳನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಕರಣವೂ ದಾಖಲಾಗಿದೆ.

Edited By :
PublicNext

PublicNext

06/11/2021 09:18 pm

Cinque Terre

42.96 K

Cinque Terre

0