ಮುಂಬೈ:ಶಾರುಕ್ ಖಾನ್ ಪುತ್ರ ರ್ಯನ್ ಖಾನ್ ಡ್ರಕ್ಸ್ ನಿಂದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಔಟ್ ಆಗಿದ್ದಾರೆ. ಅವರ ಜಾಗಕ್ಕೆ ಈಗ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಬಂದಿದ್ದಾರೆ. ಹೌದು. ಶಾರುಕ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಈ ಕಾರಣಕ್ಕೆನೆ ಈಗ ಈ ಬದಲಾವಣೆ ಆಗಿದೆ.
ಸಂಜಯ್ ಕುಮಾರ್ ಸಿಂಗ್ ಈಗಾಗಲೇ ಒಡಿಶಾ ದಲ್ಲಿ ಡ್ರಗ್ಸ್ ಕೇಸ್ ಸಂಬಂಧಿಸಿದಂತೆ ಕೆಲಸ ಮಾಡಿದ್ದಾರೆ. ಡ್ರಗ್ಸ್ ಲೋಕದಲ್ಲಿ ಭಾರಿ ಸಂಚಲನವನ್ನೇ ಮೂಡಿಸಿ ದಂಧಕೋರರಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಇಂತಹ ಟಫ್ ಆಫೀಸರ್ ಈಗ ಶಾರುಖ್ ಪುತ್ರನ ಡ್ರಗ್ಸ್ ಕೇಸ್ ಅನ್ನ ಹ್ಯಾಂಡಲ್ ಮಾಡಲಿದ್ದಾರೆ. ಶಾರುಕ್ ಪುತ್ರನ ಕೇಸ್ ಸೇರಿದಂತೆ ಇನ್ನೂ 6 ಕೇಸ್ ಗಳು ಸಂಜಯ್ ನೇತೃತ್ವದಲ್ಲಿಯೇ ತನಿಖೆ ನಡೆಯಲಿವೆ.
PublicNext
06/11/2021 04:13 pm