ನೆಲಮಂಗಲ(ಬೆಂಗಳೂರು): ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದ್ರೆ ಇದು ಕೊಲೆ ಎಂದು ಆರೋಪಿಸಿದ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಜಿಂದಾಲ್ ಬಳಿ ಈ ಪ್ರಕರಣ ನಡೆದಿದೆ. ಶೃತಿ (29) ಎಂಬುವವರೇ ಆತ್ಮಹತ್ಯೆಗೆ ಶರಣಾದ ಮಹಿಳೆ.
2018 ರಲ್ಲಿ ಕನಕಪುರ ಚಿಕ್ಕಮುದ್ವಾಡಿಯ ವಿನಯ್ ಎಂಬುವವರೊಡನೆ ಎಂ.ಎಸ್ಸಿ ಪದವೀಧರೆಯಾದ ಶೃತಿ ಅವರ ಮದುವೆ ಆಗಿತ್ತು. ಇನ್ನೂ ಬಿ.ಇ, ಎಂ.ಟೆಕ್ ಪದವೀಧರನಾದ ಪತಿ ವಿನಯ್ ಜಿಂದಾಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಇವರು ಚಿಕ್ಕಬಿದರಕಲ್ಲು ಬಳಿ ವಾಸವಿದ್ದರು. ಅಳಿಯ ಹಾಗೂ ಅತ್ತೆ ಮನೆಯವರು ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದು ಆತ್ಮಹತ್ಯೆ ಅಲ್ಲ ಕೊಲೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಶೃತಿ ಪೋಷಕರು ಒತ್ತಾಯಿಸಿದ್ದಾರೆ.
PublicNext
05/11/2021 03:34 pm