ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಟಾಕಿ ತರಲು ಹೋಗಿದ್ದ ಬಾಲಕ ಕಿಡ್ನಾಪ್,ಕೊಲೆ

ಮೈಸೂರು: ದೀಪಾವಳಿಯ ಹಿನ್ನೆಲೆಯಲ್ಲಿ ನಿನ್ನೆ ಸಾಯಂಕಾಲ ಹುಣಸೂರು ತಾಲೂಕಿನ ಹನಗೋಡಿನಲ್ಲಿ ಪಟಾಕಿ ತರಲೆಂದು ಹೋಗಿದ್ದ 10 ವರ್ಷದ ಕಾರ್ತಿಕ್ ಅಪಹರಣವಾಗಿತ್ತು.

ಹೋಲ್ ಸೆಲ್ ತರಕಾರಿ ಉದ್ಯಮಿ ನಾಗರಾಜ್ ಅವರ ಪುತ್ರನನ್ನು ಕಿಡ್ನಾಪ್ ಮಾಡಿದ ಪಾಪಿಗಳು ತಂದೆಗೆ ಕರೆ ಮಾಡಿ 4 ಲಕ್ಷ ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಈ ಕರೆ ಬರುತ್ತಿದ್ದಂತೆ ಕಾರ್ತಿಕ್ ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇನ್ನು ಮಾಹಿತಿ ದಾಖಲಾಗುತ್ತಿದ್ದಂತೆಯೇ ಪೊಲೀಸರು ರಾತ್ರಿಯಿಂದಲೇ ತನಿಖೆ ಶುರು ಮಾಡಿದ್ದರು. ಖುದ್ದು ಎಸ್ಪಿ ಆರ್.ಚೇತನ್, ಎಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಬಾಲಕ ಶೋಧ ಮುಂದುವರೆದಿತ್ತು. ಈ ವೇಳೆ ಬಾಲಕನ ಮನೆಗೆ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿದ್ದರು.

ಬಾಲಕನನ್ನು ಅಪಹರಿಸಿದ ಪಾಪಿಗಳು ಆತನನ್ನು ಕೊಲೆ ಮಾಡಿದ್ದಾರೆ. ಸದ್ಯ ಕೊಲೆ ಮಾಡಿದ ಪ್ರಮುಖ ಆರೋಪಿಯನ್ನು 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ಧಾರೆ. ಜವರಯ್ಯ ಬಂಧಿತ ಆರೋಪಿಯಾಗಿದ್ದು, ಹುಣಸೂರಿನ ದಾಸನಪುರ ನಿವಾಸಿ ಎನ್ನಲಾಗಿದೆ.

ಹಣದ ಆಸೆಗಾಗಿ ಮಗುವನ್ನು ಕಿಡ್ನಾಪ್ ಮಾಡಿ ರಾತ್ರಿಯೇ ಕೊಂದು ಪೊದೆಯಲ್ಲಿ ಶವ ಎಸೆದು ಪರಾರಿಯಾಗಿದ್ದ ದುಷ್ಕರ್ಮಿಗಳು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ.

Edited By : Nirmala Aralikatti
PublicNext

PublicNext

04/11/2021 05:54 pm

Cinque Terre

84.79 K

Cinque Terre

1