ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಸ್ಥಾನ: 14ರ ಬಾಲಕನಿಗೆ ಲೈಂಗಿಕ ಕಿರುಕುಳ- ನ್ಯಾಯಾಧೀಶರ ಬಂಧನ

ಜೈಪುರ: 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನ್ಯಾಯಾಧೀಶ ಜಿತೇಂದ್ರ ಗುಲಿಯಾ ಅವರನ್ನು ಬಂಧಿಸಿದ ಘಟನೆ ರಾಜಸ್ಥಾನದ ಭರತ್‌ಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಜೈಪುರದಲ್ಲಿ ಬಂಧಿಸಲ್ಪಟ್ಟ ನ್ಯಾಯಾಧೀಶ ಜಿತೇಂದ್ರ ಗುಲಿಯಾ ಅವರನ್ನು ಭರತ್‌ಪುರಕ್ಕೆ ಕರೆತಂದು, ಅಲ್ಲಿನ ಆರ್‌ಬಿಎಂ ಆಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಅವರನ್ನು ಇಂದು (ಗುರುವಾರ) ಭರತ್‌ಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

14 ವರ್ಷದ ಸಂತ್ರಸ್ತ ಬಾಲಕ ಸಹ ಹೇಳಿಕೆ ನೀಡಲು ನ್ಯಾಯಾಲಯಕ್ಕೆ ತೆರಳಿದ್ದು, ಅನಾರೋಗ್ಯದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಮತ್ತು ಎಸ್‌ಪಿ ದೇವೇಂದ್ರ ವಿಷ್ಣೋಯ್ ಅವರು ಸಂತ್ರಸ್ತನ ಮನೆಗೆ ಭೇಟಿ ನೀಡಿದ್ದರು. ನ್ಯಾಯಾಧೀಶರ ಕುಟುಂಬದವರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಬಾಲಕನ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ.

Edited By : Vijay Kumar
PublicNext

PublicNext

04/11/2021 02:04 pm

Cinque Terre

38.66 K

Cinque Terre

2

ಸಂಬಂಧಿತ ಸುದ್ದಿ