ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿಯಲ್ಲಿ ಪೊಲೀಸ್ ಮಗನ ಬರ್ಬರ ಕಗ್ಗೊಲೆ

ಕಲಬುರಗಿ:ಪೊಲೀಸ್ ಕಾನ್ ಸ್ಟೇಬಲ್ ಪುತ್ರನನ್ನ ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಲ್ಲಿಯ ಕೇಂದ್ರ ಬಸ್ ನಿಲ್ದಾಣದಲ್ಲಿಂದು ನಡೆದಿದೆ.

ಪೊಲೀಸ್ ಕಾನ್ ಸ್ಟೇಬಲ್ ಚಂದ್ರಕಾಂತ್ ಪುತ್ರ 27 ವರ್ಷದ ಅಭಿಷೇಕ್ ಈಗ ಕೊಲೆಯಾದ ವ್ಯಕ್ತಿ.ಜಿಮ್ ಹೋಗಿ ಬರ್ತಿನೀ ಅಂತಲೇ ಅಭಿಷೇಕ್ ಮನೆ ಬಿಟ್ಟಿದ್ದಾನೆ. ಆದರೆ ದುಷ್ಕರ್ಮಿಗಳು ಈತನ ಬೈಕ್ ಬೆನ್ನಟ್ಟಿ ಬಂದಿದ್ದಾರೆ. ತಪ್ಪಿಸಿಕೊಳ್ಳಲು ಅಭಿಷೇಕ್ ಕೇಂದ್ರ ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಓಡಿ ಹೋಗಿದ್ದಾನೆ.

ಆದರೂ ಸಹ ದುಷ್ಕರ್ಮಿಗಳು ಕೊಚ್ಚಿ ಕೊಂದಿದ್ದಾರೆ. ಹಳೆ ದ್ವೇಷವೇ ಕೊಲೆಗೆ ಕಾರಣ ಅನ್ನೊದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಲೆಗಾರರ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

Edited By :
PublicNext

PublicNext

04/11/2021 01:15 pm

Cinque Terre

40.3 K

Cinque Terre

0

ಸಂಬಂಧಿತ ಸುದ್ದಿ