ತಿರುವನಂತಪುರಂ: ಪಾಪಿ ತಂದೆಯೊಬ್ಬನ ಮೂಢನಂಬಿಕೆಗೆ 11 ವರ್ಷದ ಪುತ್ರಿ ಬಲಿಯಾದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಫಾತಿಮಾ ಮೃತ ಬಾಲಕಿ. ತಂದೆ ಸತ್ತಾರ್ ಮೂಢನಂಬಿಕೆಯ ಕಾರಣದಿಂದಾಗಿ ಬಾಲಕಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಫಾತಿಮಾ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯದೆ ತಂದೆ ಸತ್ತಾರ್, ಇಮಾಮ್ (ಮುಸ್ಲಿಂ ಧರ್ಮದ ಮುಖಂಡ) ಉವೈಸ್ ಬಳಿ ಕರೆದೊಯ್ದು, ಧಾರ್ಮಿಕ ವಿಧಿವಿಧಾನಗಳ ಮೂಲಕ ಚಿಕಿತ್ಸೆ ಕೊಡಿಸಲು ಮುಂದಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಫಾತಿಮಾ ಸಾವನ್ನಪ್ಪಿದ್ದಾಳೆ.
ಸ್ಥಳೀಯರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲ ನ್ಯಾಯ ಕಾಯ್ದೆ ಅಡಿ ಬಾಲಕಿಯ ತಂದೆ ಮತ್ತು ಇಮಾಮ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
PublicNext
03/11/2021 06:14 pm