ಕೊಪ್ಪಳ:ದೀಪಾವಳಿ ಹಬ್ಬ ಎಲ್ಲ ಹಬ್ಬಗಳಿಗಿಂತಲೂ ತುಂಬಾ ವಿಭಿನ್ನ. ದೀಪಗಳ ಖುಷಿಯಲ್ಲಿಯೇ ಸಿಹಿ ತಿನ್ನೋದು ಒಂದು ಕಡೆಯಾದರೆ, ಇದೇ ಖುಷಿಯಲ್ಲಿಯೇ ಇಸ್ಪೀಟ್ ಆಡೋರೂ ಇದ್ದಾರೆ. ಅದು ಕೊಪ್ಪಳ ಜಿಲ್ಲೆಯಲ್ಲಿ ಅತೀ ಹೆಚ್ಚು ಅನ್ನೋ ಮಾತೂ ಇದೆ. ಅದಕ್ಕೇನೆ ಇಲ್ಲಿಯ ಪೊಲೀಸರು ಖಡಕ್ ಆಗಿಯೇ ಹಬ್ಬದ ಮುಂಚೆನೇ ವಾರ್ನಿಂಗ್ ಕೊಟ್ಟಿದ್ದಾರೆ.
ಕೊಪ್ಪಳದಲ್ಲಿ ದೀಪಾವಳಿ ಹಬ್ಬಕ್ಕೆ ಇಸ್ಪೀಟ್ ಆಟ ಜೋರಾಗಿಯೇ ಇರುತ್ತದೆ. ಇದನ್ನ ಮನಗಂಡ ಪೊಲೀಸರು ಜಿಲ್ಲೆಯ ಹಳ್ಳಿಗಳಲ್ಲಿ ಮೈಕ್ ಮೂಲಕವೇ ಈಗಾಗಲೇ ವಾರ್ನ್ ಮಾಡಿದ್ದಾರೆ. ಹಬ್ಬದ ದಿನ ಯಾರಂದ್ರೆ ಯಾರೂ ಜೂಜಾಡುವಂತಿಲ್ಲ. ಒಂದು ವೇಳೆ ಆಡಿದರೇ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ಇಸ್ಪೀಟ್ ಪ್ರಿಯರಿಗೆ ಜಾಸ್ತಿನೇ ಬೇಸರ ಆಗಿದೆ. ಆದರೆ ಪೊಲೀಸ್ ಇಲಾಖೆ ಹಬ್ಬದ ಮುನ್ನವೇ ಎಚ್ಚೆತ್ತುಕೊಂಡು ವಾರ್ನ್ ಮಾಡಿದೆ.
PublicNext
03/11/2021 05:57 pm