ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶವಗಾರದ ಮುಂದೆ ಎರಡು ಗುಂಪುಗಳ ನಡುವೆ ಮಾರಾಮಾರಿ..

ದಾವಣಗೆರೆ : ದಾವಣಗೆರೆ ಜಿಲ್ಲಾಸ್ಪತ್ರೆಯ ಅವರಣದಲ್ಲಿರುವ ಶವಗಾರದ ಮುಂದೆ ನಾಗರಕಟ್ಟೆ ಹಾಗೂ ಹಳವುದರ ಲಂಬಾಣಿಹಟ್ಟಿ ಗ್ರಾಮಸ್ಥರ ನಡುವೆ ಹೊಡೆದಾಟ ನಡೆದಿದೆ.

ಹಳವುದರ ಲಂಬಾಣಿಹಟ್ಟಿ ಶಿವನಾಯ್ಕ್ ಎಂಬುವವರ ಪತ್ನಿ ಗಂಡನನ್ನು ಬಿಟ್ಟು ನಾಗರಕಟ್ಟೆಯ ತವರು ಮನೆ ಸೇರಿದ್ದರು. ನಿನ್ನೆ ಶಿವನಾಯ್ಕ್ ಪತ್ನಿ ರೂಪಾಬಾಯಿ ಹಾಗೂ ಮಕ್ಕಳನ್ನು ಕರೆತರಲು ನಾಗರಕಟ್ಟೆಗೆ ಹೋಗಿದ್ದರು. ಈ ವೇಳೆ ಗಲಾಟೆಯಾದ ಹಿನ್ನಲೆಯಲ್ಲಿ 37 ವರ್ಷದ ಶಿವನಾಯ್ಕ್ ವಿಷ ಕುಡಿದು ಸಾವನ್ನಪ್ಪಿದ್ದರು.

ಈ ಘಟನೆ ಬಳಿಕ ರೂಪಾಬಾಯಿ ಕಡೆಯವರು ಶಿವನಾಯ್ಕ್ ನನ್ನು ಹೊಡೆದು ಕೊಲೆಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಜೊತೆಗೆ ರೂಪಾಬಾಯಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪ ಮಾಡಿದ್ದರು.

ಇದರಿಂದ ಕೋಪಿತರಾದ ರೂಪಾಬಾಯಿ ಮನೆಯವರು ಶಿವನಾಯ್ಕ್ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಸ್ಪರ ಎರಡು ಗ್ರಾಮದವರು ಬಡಿದಾಡಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಡಾವಣೆ ಠಾಣೆಯ ಪೊಲೀಸರ ಭೇಟಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

03/11/2021 05:34 pm

Cinque Terre

78.05 K

Cinque Terre

1

ಸಂಬಂಧಿತ ಸುದ್ದಿ