ಬೆಂಗಳೂರ: ಪುನೀತ್ ರಾಜ್‌ಕುಮಾರ್ ನಿಧನದಿಂದ ದೊಡ್ಡದೊಂದು ಶೂನ್ಯ ಆವರಿಸಿದೆ. ಆ ಶೋಕದಿಂದ ಹೊರಬರಲು ಇಡೀ ಕರುನಾಡಿಗೆ ಸಾಧ್ಯವಾಗುತ್ತಿಲ್ಲ. ಆದ್ರೆ ಈ ನಡುವೆ ಕಿರಾತಕನೋರ್ವ ಅಪ್ಪು ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ. ಪುನೀತ್ ರಾಜ್ ಕುಮಾರ್ ಸಾವಿನ ಸಂದರ್ಭ ಯಾವುದೇ ಅಹಿತಕರ ಘಟನೆಗೆ ಅವಕಾಶ ಸಿಗಬಾರದು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು.
ಮದ್ಯ ನಿಷೇಧ ವಿರೋಧಿಸುವ ಭರದಲ್ಲಿ ಮದ್ಯದ ಬಾಟಲಿಯನ್ನು ಕೈಯಲ್ಲಿ ಹಿಡಿದಿದ್ದ ಕಿರಾತಕ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ. "ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ.. ನಾವು ಮದ್ಯ ಸೇವನೆ ಮಾಡಿ ಆತನ ಸಮಾಧಿ ಮೇಲೆ ಮೂತ್ರ ಮಾಡುತ್ತೇವೆ" ಎಂದು ಬರೆದಿದ್ದ. ಇದನ್ನು ಕಂಡ ಅಭಿಮಾನಿಗಳು ಕೆಂಡವಾಗಿದ್ದರು. ಸುದೀಪ್ ಪುತ್ರಿ ಸಹ ಆಕ್ರೋಶ ಹೊರಹಾಕಿದ್ದರು. ಆರೋಪಿಯನ್ನು ಕೂಡಲೇ ಬಂಧಿಸಿ ಎಂದು ಪೊಲೀಸರಿಗೆ ಒತ್ತಾಯ ಬಂದಿತ್ತು. ಜನರ ಒತ್ತಾಯಕ್ಕೆ ಮಣಿದ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಿತ್ವಿಕ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು ಈತ ಉತ್ತರ ಭಾರತ ಮೂಲದವನೆಂದು ತಿಳಿದು ಬಂದಿದೆ. ಈತ ಇಂತಹ ಕೃತ್ಯ ಎಸಗಿದ್ದು ಇದೇ ಮೊದಲೇನಲ್ಲ. ನಟ ಅಂಬರೀಶ್, ಸಾಹಿತಿ ಯು. ಆರ್ ಅನಂತ ಮೂರ್ತಿ ಹಾಗೂ ಸೈನಿಕರು ಹುತಾತ್ಮರಾದ ಸಂದರ್ಭದಲ್ಲಿಯೂ ಈತ ಇದೇ ರೀತಿ ಅವಹೇಳಕಾರಿ ಪೋಸ್ಟ್ ಹಾಕಿದ್ದ ಎಂಬುದು ತಿಳಿದುಬಂದಿದೆ.
PublicNext
02/11/2021 03:06 pm