ಹರಿಯಾಣ: ಇಲ್ಲಿಯ ಒಬ್ಬಳೇ ಮಹಿಳೆ ಮೇಲೆ ಬರೋಬ್ಬರಿ 7 ಜನ ಒಂದೇ ವರ್ಷದಲ್ಲಿ 7 ಬಾರಿ ಬಲಾತ್ಕರ ಮಾಡಿದ್ದಾರೆ. ಇದನ್ನ ನಾವು ಹೇಳುತ್ತಿಲ್ಲ. ಮಹಿಳೆ ಕೊಟ್ಟ ರೇಪ್ ದೂರುಗಳೇ ಆ ಸತ್ಯವನ್ನ ಹೇಳುತ್ತಿವೆ. ಆದರೆ ಎಲ್ಲವೂ ಸತ್ಯವೇ ? ಇದನ್ನ ತಿಳಿಯೋಕೆ ಇಲ್ಲಿದೆ ನೋಡಿ ಆ ಸ್ಟೋರಿ.
ಬಲಾತ್ಕಾರಕ್ಕೆ ಒಳಗಾದ ಮಹಿಳೆಯ ಹೆಸರು ಏನೂ ಅಂತ ಕೇಳಬೇಡಿ. ಅದು ಇಲ್ಲಿ ಸಿಗೋದಿಲ್ಲ. ಆ ಮಾಹಿತಿ ನಿಮಗೆ ಲಭ್ಯವೂ ಆಗೋದಿಲ್ಲ. ಆದರೆ ಈ ಮಹಿಳೆ ಕೊಟ್ಟ ರೇಪ್ ಕೇಸಿನ ಲೆಕ್ಕ 7 ಇವೆ. ಇಲ್ಲಿಯ ಗುರುಗ್ರಾಮನ 7 ಬೇರೆ ಬೇರೆ ಠಾಣೆಯಲ್ಲಿ 7 ಬೇರೆ ಬೇರೆ ಜನರ ಮೇಲೆ 7 ರೇಪ್ ದೂರ ಕೊಡಲಾಗಿದೆ. ಇದನ್ನೆಲ್ಲ ಪರಿಶೀಲಿಸಿದ ಪೊಲೀಸರು, ಒಂದೇ ವರ್ಷದಲ್ಲಿಯೆ ಇಷ್ಟೊಂದು ರೇಪ್ ಒಬ್ಬ ಮಹಿಳೆ ಮೇಲೆ ಹೇಗೆ ಸಾಧ್ಯ ಅಂದುಕೊಂಡಿದ್ದಾರೆ. ಅದಕ್ಕೆ ಸರಿಯಾದ ಉತ್ತರವನ್ನೂ ತನಿಖೆ ಮೂಲಕವೇ ಈಗ ಕಂಡು ಹಿಡಿದಿದ್ದಾರೆ. ಇದು ನಿಜ, 7 ರೇಪ್ ಕೇಸ್ ನಲ್ಲಿ 2 ರೇಪ್ ಕೇಸ್ ಸುಳ್ಳೆ ಸುಳ್ಳು ಅಂತಲೇ ಹೇಳಿದೆ. ಉಳಿದವೂ ಕೂಡ ಫೇಕ್ ಆಗಿರಬಹುದು ಅನ್ನೋ ಅಂದಾಜ ಮೇಲೇನೆ ಈಗ ಪೊಲೀಸರು ವರ್ಕೌ ಮಾಡ್ತಿದ್ದಾರೆ.
PublicNext
29/10/2021 06:12 pm