ಕಲಬುರಗಿ: ಕಾಲೇಜಿಗೆ ನುಗ್ಗಿ ವಿಧ್ಯಾರ್ಥಿಗಳಿಗೆ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ಆಳಂದ ಪಟ್ಟಣದ ಡಾ. ರಾಮ ಮನೋಹರ ಲೋಹಿಯಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಕ್ಯಾಂಪಸ್ ನಲ್ಲಿ ರಿವಾಲ್ವರ್ ತೋರಿಸಿ ಭೀತಿ ಹುಟ್ಟಿಸಿರುವ ಮೂವರನ್ನು ಬಂಧಿಸಲಾಗಿದೆ.ಅಮೇರ್ ಸೋಹೆಲ್, ಬಶೀರ ಅಹ್ಮದ್, ಅಮೇನ್ ಪಟೇಲ್ ಬಂಧಿತರು.
ರಿವಾಲ್ವರ್ ಇಟ್ಟುಕೊಂಡು ಕಾಲೇಜಿಗೆ ಬಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಹೀಗೆ ಒಳ ನುಗ್ಗಿದ ಇವರು ಸೀದ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೋಣೆಗೆ ನುಗ್ಗಿ ರಿವಾಲ್ವರ್ ತೋರಿಸಿ ಗೂಂಡಾಗಿರಿ ಮಾಡಿದ್ದಾರೆ. ಕಾಲೇಜಿಗೆ ಬಂದು ಹೀಗೇಕೆ ಮಾಡಿದರು ಎಂಬುದು ಯಕ್ಷ ಪಶ್ನೆಯಾಗಿದೆ.ಈ ಕುರಿತು ಆಳಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
29/10/2021 12:38 pm