ಶ್ರೀಕಾಕುಳಂ: ಸುಖಮಯ ಜೀವನ ನಡೆಸಲೆಂದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಅವರು ಸಮಸ್ಯೆಗೆ ಅಂಜಿ ಬದುಕನ್ನೇ ಅಂತ್ಯಗೊಳಿಸಿಕೊಂಡಿರುವುದು ನಿಜಕ್ಕೂ ಖೇದಕರ ಸಂಗತಿ. ಹೌದು ಅವರಿಬ್ಬರು ಶಿಕ್ಷಿತರು ಜೀವನ ಅಂದಮೇಲೆ ಸವಾಲುಗಳು ಬರುವುದು ಸಹಜ ಧೈರ್ಯ ಮಾಡಿ ಮದುವೆ ಆದ ನವದಂಪತಿ ಜೀವನವನ್ನು ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಬುಧವಾರ ನಡೆದಿದೆ.
ಮೃತ ದಂಪತಿಯನ್ನು ಹರೀಶ್ (29) ಮತ್ತು ರೇಣುಕಾ ದಿವ್ಯಾ (20) ಎಂದು ಗುರುತಿಸಲಾಗಿದೆ. ಇಬ್ಬರ ಆತ್ಮಹತ್ಯೆ ಹಿಂದಿರುವ ಕಾರಣ ನಿಗೂಢವಾಗಿದ್ದು, ತನಿಖಾ ನಂತರ ತಿಳಿದುಬರಬೇಕಿದೆ.
ಹರೀಶ್, ಶ್ರೀಕಾಕುಳಂ ಜಿಲ್ಲೆಯ ತನಿವಾಡ ಗ್ರಾಮದ ನಿವಾಸಿ. ಈತ ಎಂಸಿಎ ಓದಿದ್ದ. ರೇಣುಕಾ, ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ. ಇಬ್ಬರು ಒಂದೇ ಗ್ರಾಮದವರು ಹಾಗೂ ಒಂದೇ ಸಮುದಾಯದವರಾಗಿದ್ದರಿಂದ ಪರಿಚಯವಾಗಿ, ಪ್ರೀತಿಗೆ ತಿರುಗಿತ್ತು. ಕಳೆದ ಸೆಪ್ಟೆಂಬರ್ 1ರಲ್ಲಿ ಇಬ್ಬರ ಮದುವೆ ಸರಳವಾಗಿ ದೇವಸ್ಥಾನದಲ್ಲೇ ನಡೆದಿತ್ತು.
ಇಬ್ಬರು ಕೆಲಸ ಹುಡುಕಾಟಕ್ಕೆಂದು ಎರಡು ದಿನಗಳ ಹಿಂದೆ ವಿಶಾಖಪಟ್ಟಣಕ್ಕೆ ಬಂದಿದ್ದರು. ಪರಿಚಯಸ್ಥರ ಮನೆಯಲ್ಲೇ ಉಳಿದುಕೊಂಡಿದ್ದರು. ಬುಧವಾರ ಏನಾಯಿತೋ ಇಬ್ಬರ ಶವ ಮನೆಯ ಫ್ಯಾನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಸದ್ಯ ತನಿಖೆ ಚುರುಕುಗೊಂಡಿದೆ.
PublicNext
29/10/2021 09:37 am