ನವದೆಹಲಿ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನ ಪ್ರಮುಖ ಸಾಕ್ಷಿ ಎನ್ನಲಾದ ಕಿರಣ್ ಗೋಸಾವಿ ಎಂಬಾತನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಮುಂಚೆ ಈತ ನಾನು ಯಾವುದೇ ಕ್ಷಣದಲ್ಲಾದರೂ ಪೊಲೀಸರಿಗೆ ಶರಣಾಗಬಹುದು ಎಂದು ಹೇಳಿಕೆ ನೀಡಿದ್ದ. ಅಕ್ಟೋಬರ್ ಮೂರರಂದು ರಾತ್ರಿ ಎನ್‌ಸಿಬಿ ಅಧಿಕಾರಿಗಳು ಕ್ರೂಸ್ ಹಡಗಿನಲ್ಲಿ ಆರ್ಯನ್ ಖಾನ್‌ನನ್ನು ಅರೆಸ್ಟ್ ಮಾಡಿದ್ದರು. ಇದೇ ವೇಳೆ ಆರ್ಯನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಕಿರಣ್ ಗೋಸಾವಿ ಸುದ್ದಿಯಾಗಿದ್ದ.
ನಾವು ದಾಳಿ ಮಾಡಿದ ವೇಳೆ ಕಿರಣ್ ಗೋಸಾವಿ ಮತ್ತು ಮನೀಶ್ ಭಾನುಶಾಲಿ ಸ್ಥಳದಲ್ಲಿದ್ದರು. ಹೀಗಾಗಿ ಇವರು ನಮಗೆ ಪ್ರಮುಖ ಸಾಕ್ಷಿಯಾಗಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಮುಖ್ಯಸ್ಥ ಜ್ಞಾನೇಶ್ವರ್ ಸಿಂಗ್ ಹೇಳಿದ್ದಾರೆ.
PublicNext
28/10/2021 04:08 pm