ಕಲಬುರಗಿ: ಯುವಕನೋರ್ವ ತನ್ನ ಗೆಳೆಯನನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಕಲಬುರಗಿ ಹೊರವಲಯದ ಕಾಳನೂರ್ ಡಾಬಾ ಬಳಿ ನಡೆದಿದೆ.
ಫಿಲ್ಟರ್ ಬೆಡ್ ನಿವಾಸಿ ಆಕಾಶ್ (21) ಕೊಲೆಯಾದ ಯುವಕ. ಆಕಾಶ್‌ನನ್ನು ಸ್ನೇಹಿತ ಶ್ರೀನಿಧಿ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆಕಾಶ್ ಓಂ ನಗರ ಕಾಲೋನಿಯ ಗ್ಯಾರೆಜ್ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಶ್ರೀನಿಧಿಯ ತಂಗಿಯನ್ನು ಆಕಾಶ್ ಪ್ರೀತಿಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಶ್ರೀನಿಧಿಯ ತಂಗಿಯನ್ನು ಕರೆದುಕೊಂಡು ಓಡಿ ಹೋಗಿದ್ದನಂತೆ. ಇದೆ ವಿಷಯಕ್ಕೆ ಆಕಾಶ್‌ನನ್ನು ಮುಗಿಸಲು ಶ್ರೀನಿಧಿ ಪ್ಲಾನ್ ಮಾಡಿದ್ದ. ಕಳೆದ ರಾತ್ರಿ ಆಕಾಶ್ ನನ್ನ ನಗರದಿಂದ ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕಲಬುರಗಿ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
28/10/2021 03:58 pm