ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಬ್ಬನಿಗಾಗಿ ರಸ್ತೆಯಲ್ಲೇ ಯುವತಿಯರಿಬ್ಬರ ನಡುವೆ ಫೈಟಿಂಗ್

ಲಕ್ನೋ: ಯುವಕನೋರ್ವನಿಗಾಗಿ ಇಬ್ಬರು ಯುವತಿಯರು ರಸ್ತೆಯ ಮಧ್ಯದಲ್ಲೇ ಹೊಡೆದಾಡಿಕೊಂಡ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಕ್ನೋದ ಬಾರಾಬಿರ್ವಾ ಚೌರ್ಗೆ ಹತ್ತಿರದ ಹೋಟೆಲ್ ಎದುರು ಸೋಮವಾರ ರಾತ್ರಿ ಘಟನೆ ನಡೆದಿದೆ. ರಾಬಿನ್ ಎಂಬಾತನನ್ನು ಇಬ್ಬರು ಯುವತಿಯರು ಪ್ರೀತಿಸುತ್ತಿದ್ದರು. ಈ ಪೈಕಿ ಓರ್ವ ಯುವತಿ (ರಾಬಿನ್ ಮಾಜಿ ಗೆಳತಿ) ಕಾರಿನಲ್ಲಿ ಕುಳಿತು ತನ್ನ ಗೆಳೆಯನಿಗಾಗಿ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದಳು. ಅದೇ ವೇಳೆ ಗೆಳೆಯ ರಾಬಿನ್ ಬೇರೊಂದು ಯುವತಿಯ ಜೊತೆ ಹೋಟೆಲ್​ನಿಂದ ಹೊರಗೆ ಬರುವುದನ್ನು ಕಂಡು ಜಗಳಕ್ಕೆ ಇಳಿದಿದ್ದಾಳೆ. ಇದರಿಂದಾಗಿ ಯುವತಿಯರು ಪರಸ್ಪರ ಹೊಡೆದಾಡಿದ್ದಾರೆ.

ಘಟನೆಯಲ್ಲಿ ಹಲ್ಲೆಗೊಳಗಾದ ಹಳೆ ಗೆಳತಿಯನ್ನು ರಾಬಿನ್​ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾನೆ. ರಾಬಿನ್​ನ ಹಳೆ ಗೆಳತಿ ಎಚ್ಚರವಾದ ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ರಾಬಿನ್ ಹೊಸ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ.

Edited By : Shivu K
PublicNext

PublicNext

28/10/2021 09:27 am

Cinque Terre

66.47 K

Cinque Terre

2