ಮೈಸೂರು: ಮೊದಲೆಲ್ಲ ಗ್ರಾಮಗಳಲ್ಲಿ ಬಹಿಷ್ಕಾರದ ಶಿಕ್ಷೆ ಇತ್ತು. ಗ್ರಾಮದ ಜನ ಅದರಿಂದ ತತ್ತರಿಸಿದ್ದು ಉಂಟು. ಆದರೆ ಕಾಲ ಕ್ರಮೇಣ ಅದು ಕಡಿಮೆ ಆಗಿದೆ. ಆದರೂ ಕೆಲವು ಹಳ್ಳಿಗಳಲ್ಲಿ ಅದು ಇನ್ನೂ ಜೀವಂತವಾಗಿಯೆ ಇದೆ. ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ಬರೋಬ್ಬರಿ 12 ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.ಇದರಿಂದ ಆ ಕುಟುಂಬ ಈಗ ನಲುಗುತ್ತಿದೆ.
ಮೂಗೂರು ಗ್ರಾಮದ 12 ಕುಟುಂಬಕ್ಕೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯೆ ಕುಟುಂಬವೂ ಈ ಬಹಿಷ್ಕಾರಕ್ಕೆ ಒಳಗಾಗಿದೆ. ಬಹಿಷ್ಕಾರ ಹಾಕಿದವ್ರ ಮದುವೆಗೆ ಹೋದ್ರವರಿಗೆ ಇಲ್ಲಿ 25 ಸಾವಿರ ದಂಡ ಕೂಡ ಬಿದ್ದಿದೆ. ಅಷ್ಟೇ ಅಲ್ಲ ಬಹಿಷ್ಕಾರ ಹಾಕಿದವರ ಕುಟುಂಬವನ್ನ ಯಾರೂ ಮತನಾಡಿಸೋ ಹಾಗಿಲ್ಲ.ಶುಭ ಸಮಾರಂಭಕ್ಕೆ ಅವರನ್ನ ಆಹ್ವಾನಿಸುವಂತೇನೂ ಇಲ್ಲ.
ಆದರೆ 12 ಕುಟುಂಬಕ್ಕೆ ಬಹಿಷ್ಕಾರ ಹಾಕಲು ಕಾರಣ ಆ ಜಾಗ. ಹೌದು. ಇಲ್ಲಿ ಒಂದು ಕುಟುಂಬಕ್ಕೆ ಸೇರಿದ ಜಾಗದಲ್ಲಿ ವಾಲ್ಮಿಕಿ ಭವನ ಕಟ್ಟಲು ಮುಂದಾಗಿದ್ದಾರೆ ಗ್ರಾಮದ ಮುಖಂಡರು. ಆಗ ಆ ಕುಟುಂಬದ ಸದಸ್ಯರು ಅದನ್ನ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಗ್ರಾಮದ ಮುಖಂಡರು ಪರಿಹಾರಕೊಡೋದಾಗಿಯೂ ತಿಳಿಸಿದ್ದಾರೆ. ಈಗ ನೋಡಿದ್ರೆ ಪರಿಹಾರವೂ ಇಲ್ಲ. ಬಹಿಷ್ಕಾರದ ಶಿಕ್ಷೆ ಬೇರೆ ಅಂತಲೇ ಬಹಿಷ್ಕಾರಕ್ಕೆ ಒಳಗಾದ ಕುಟುಂಬ ಮಾಧ್ಯಮದ ಮುಂದೆ ಅಳಲು ತೋಡಿಕೊಳ್ಳುತ್ತಿದೆ.
PublicNext
27/10/2021 07:42 pm