ಮೈಸೂರು:ಇಲ್ಲಿಯ ತಿ.ನರಸೀಪುರದ ಟಿ.ಮರಳ್ಳಿ ಗ್ರಾಮದ ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ 9 ತಿಂಗಳ ಹಿಂದೆ ತಿ.ನರಸೀಪುರದ ದೀಪಕ್ ಎಂಬುವವರನ್ನ ದಿವ್ಯಾ ಮದುವೆ ಆಗಿದ್ದರು. ಗಂಡನ ವರದಕ್ಷಿಣೆ ಕಿರುಕುಳಕ್ಕೆ ದಿವ್ಯಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ದಿವ್ಯಾ ಪತಿ ದೀಪಕ್ ಬೆಂಗಳೂರಿನಲ್ಲಿ ಹಸು ಸಾಕಿಕೊಂಡು ಜೀವನ ನಡೆಸಿದ್ದರು.ಆದರೆ ಮದುವೆ ನಂತರ ತಿ.ನರಸೀಪುರದಲ್ಲಿಯೇ ಪತ್ನಿ ಜೊತೆಗೆ ಬಂದು ನೆಲೆಸಿದ್ದರು. ದೀಪಕ್ ತನ್ನ ತಂದೆಗೆ ಆಸ್ತಿ ಬರೆದುಕೊಡು ಅಂತಲೂ ಪೀಡಿಸುತ್ತಿದ್ದರು.ಪುತ್ರ ಕುಡಿತಕ್ಕೆ ದಾಸನಾಗಿರೋದ್ರಿಂದಲೇ ದೀಪಕ್ ತಂದೆ ಪುತ್ರನಿಗೆ ಆಸಕ್ತಿ ಕೊಟ್ಟಿರಲಿಲ್ಲ. ಇದರಿಂದ ಪತ್ನಿ ದಿವ್ಯಾಗೆ ದೀಪಕ್, ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನಂತೆ.ಇದರಿಂದ ಬೇಸತ್ತ ದಿವ್ಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿವ್ಯಾ ಪೋಷಕರಿಂದ ಪತಿ,ಅತ್ತೆ,ಮಾವ,ನಾದಿನಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
27/10/2021 04:57 pm