ಕೊಪ್ಪಳ: ಬೈಕ್ ರೈಡಿಂಗ್ ಕ್ರೇಜ್ ಸಹವಾಗಿಯೇ ಈಗ ಎಲ್ಲರಲ್ಲೂ ಇರುತ್ತದೆ. ಅತಿವೇಗದಲ್ಲಿಯೇ ಬೈಕ್ ಓಡಿಸೋ ಹುಚ್ಚಿನಿಂದ ಅನೇಕ ಅಪಘಾತಗಳು ಸಂಭವಿಸುತ್ತವೆ. ಅದರಂತೆ ಇಲ್ಲೊಬ್ಬ ಆಸಾಮಿ ತನ್ನ ಜೊತೆಗೆ ಬಂದಿದ್ದ ಹಿಂಬದಿಯ ಸವಾರನನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ. ಗಾಯಗೊಂಡ ಹಿಂಬದಿಯ ಸವಾರ ಅಲ್ಲಿಯೇ ಬಿದ್ದು ನರಳಾಡಿದ್ದಾನೆ. ಈ ಒಂದು ಘಟನೆ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವೂ ಇದೆ. ಏನ್ ಅದು ಅಂತ ಹೇಳ್ತೀವಿ.
ಕೊಪ್ಪಳದ ಎನ್.ಎಚ್-50 ಹಿಟ್ನಾಲ್ ಟೋಲ್ ಗೇಟ್ ಬಳಿಯೇ ಈ ಘಟನೆ ನಡೆದಿದೆ. ಅದ್ಯಾರೋ ಪುಣ್ಯಾತ್ಮ ಸ್ಪೀಡ್ ಆಗಿಯೇ ಬೈಕ್ ತೆಗೆದುಕೊಂಡು ಇಲ್ಲಿಯ ಫುಟ್ ಪಾತ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಹಿಂಬದಿಯ ಸವಾರನಿಗೆ ತೀವ್ರ ಪೆಟ್ಟಾಗಿದೆ. ಇದನ್ನ ಕಂಡು ಕಾಣದಂತೆ ಬೈಕ್ ಸವಾರ ಬೈಕ್ ತೆಗೆದುಕೊಂಡು ಓಡಿ ಹೋಗಿದ್ದಾನೆ. ರಾತ್ರಿ 12 ಗಂಟೆ ಆಗಿದ್ದರಿಂದ ಅಲ್ಲಿ ಆಗ ಯಾರೂ ಇರಲಿಲ್ಲ. ಆದರೆ ಪಕ್ಕದ ಹೊಲದಲ್ಲಿ ಮೆಕ್ಕೆಜೋಳದ ರಾಶಿಯನ್ನ ಕಾಯುತ್ತಿದ್ದ ರೈತ ಈ ಘಟನೆಯ ಗಮನಿಸಿದ್ದಾನೆ. ರೈತ ಹೇಳಿದ ಘಟನೆ ಮೇಲೇನೆ ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡ ವ್ಯಕ್ತಿ ಯಾರು ? ಬೈಕ್ ಡಿಕ್ಕಿ ಹೊಡೆಸಿ ಓಡಿ ಹೋದ ವ್ಯಕ್ತಿ ಯಾರೂ ? ಅನ್ನೋದನ್ನ ತಿಳಿಯಲು ಪೊಲೀಸರು ಪತ್ರಿಕಾ ಪ್ರಕಟನೆಯನ್ನೂ ಈಗ ಹೊರಡಿಸಿದ್ದಾರೆ.
PublicNext
27/10/2021 12:30 pm