ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ, ಆರೋಪಿಗಳ ಬಂಧನ

ಚಿತ್ರದುರ್ಗ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಜನವರಿ 2019 ನೇ ಸಾಲಿನಲ್ಲಿ ಕರೆಯಲಾಗಿದ್ದ ಸಂಚಾರಿ ನಿರೀಕ್ಷಕರು ಹಾಗೂ ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 70 ಲಕ್ಷ ರೂಪಾಯಿ ಹಣವನ್ನು ವಂಚನೆ ಮಾಡಿರುವ ಐವರು ಆರೋಪಿಗಳನ್ನು ಹೊಸದುರ್ಗ ಪೋಲಿಸರು ಬಂಧಿಸಿದ್ದಾರೆ.

ವಂಚನೆಗೆ ಒಳಗಾಗಿದ್ದ ಅಭಿಷೇಕ್ ಅವರು 9/10/2021 ರಂದು ಹೊಸದುರ್ಗ ಪೋಲಿಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣವನ್ನು ಪೋಲಿಸರು ಗಂಭೀರವಾಗಿ ಪರಿಗಣಿಸಿದ್ದರು. ವಂಚನೆ ಆರೋಪಿಗಳನ್ನು ಪತ್ತೆ ಹಚ್ಚಲು ಚಿತ್ರದುರ್ಗ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಜಿ. ರಾಧಿಕಾ ತಂಡವೊಂದನ್ನು ರಚನೆ ಮಾಡಲಾಗಿತ್ತು.

ಆರೋಪಿತರಾದ 1) ಮಹಮ್ಮದ್‌ಸಾಬ್ ಅಲ್ಲಾಸಾಬ್ ಭಾಗವಾನ್ ತಂದೆ ಅಲಿಸಾಬ್, 2)

ಬಸವರಾಜ, 3) ವೀರಭದ್ರಪ್ಪ ಸೋಮಲಿಂಗಪ್ಪ ಅರಗಿನಶೆಟ್ಟಿ, ಈ ಮೂವರನ್ನು

ದಿನಾಂಕ 16/10/2021 ವಶಕ್ಕೆ ಪಡೆದುಕೊಂಡು ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ, 4) ಬಿ.ಮಂಜುನಾಥ, 5) ಅನಿಲ್ ಕುಮಾರ್ ಬೆಂಗಳೂರು ಇವರಿಬ್ಬರನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸ್ ವಶಕ್ಕೆ ಪಡೆದುಕೊಂಡು, ಪ್ರಕರಣಕ್ಕೆ

ಸಂಬಂಧಿಸಿದಂತೆ 16,40,00000 ರೂ ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ್ದ 5 ಲಕ್ಷ ರೂ ಬೆಲೆಬಾಳುವ ಸ್ಕೋಡ ಕಾರು ಹಾಗೂ ಆರೋಪಿತರು ಸೃಷ್ಟಿಸಿದ ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ವಂಚನೆ ಮಾಡಿದ ವಿಧಾನ : ಆರೋಪಿತರು ನಮಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ

ಪರಿಚಯವಿದ್ದು, ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಪರಿಚಯವಿರುತ್ತದೆ. ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಡುತ್ತೇವೆ

ಅಂತಾ ಸರ್ಕಾರಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದವರನ್ನು ನಂಬಿಸಿ ಜನವರಿ-2019 ನೇ ಸಾಲಿನಲ್ಲಿ ಕೆಎಸ್ಸಾರ್ಟಿಸಿ

ಇಲಾಖೆಯಲ್ಲಿ ಕರೆಯಲಾಗಿರುವ ಸಂಚಾರಿ ನಿರೀಕ್ಷಕರು ಹಾಗೂ ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು

ಕೊಡಿಸುವುದಾಗಿ ಆಸೆ ಹುಟ್ಟಿಸಿ, ಅಭ್ಯರ್ಥಿಗಳಿಂದ ದಾಖಲಾತಿಗಳನ್ನು ಪಡೆದು ಹಗರಿಬೊಮ್ಮನಹಳ್ಳಿ ತಾಲ್ಲೂಕು, ಮಾನ್ವಿ

ಡ್ಯಾಂ ಹತ್ತಿರ ಇರುವ ಕೆಎಸ್ಸಾರ್ಟಿಸಿ ತರಬೇತಿ ಕೇಂದ್ರದ ಮುಂಭಾಗದಲ್ಲಿ ಹಾಗೂ ಹಗರಿಬೊಮ್ಮನಹಳ್ಳಿ ಪ್ರವಾಸಿ ಮಂದಿರದಲ್ಲಿ ಸಂದರ್ಶನ ನಡೆಸಿರುತ್ತಾರೆ.

ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಮಾಡಿಸಿ, ನಕಲಿ ಆದೇಶಗಳನ್ನು ನೀಡಿರುತ್ತಾರೆ. ಇದಾದ ಬಳಿಕ ಅಭ್ಯರ್ಥಿಗಳು ಕೆಲಸಕ್ಕಾಗಿ ಸೇರಲು ಸಂಬಂಧಪಟ್ಟ ಕೆಎಸ್ಸಾರ್ಟಿಸಿ ಡಿಪೋಗಳಿಗೆ ಹೋದಾಗ ಆರೋಪಿತರು ನಕಲಿ ಆದೇಶಗಳನ್ನು ಕೊಟ್ಟು ಮೋಸಮಾಡಿರುವುದು ಗೊತ್ತಾಗಿರುತ್ತದೆ.

ಆರೋಪಿತರು ಇದೇ ರೀತಿ ಸುಮಾರು 500 ಜನ ಅಭ್ಯರ್ಥಿಗಳಿಗೆ ಮೋಸಮಾಡಿರುವುದಾಗಿ ತಿಳಿದು ಬಂದಿರುತ್ತದೆ.

Edited By : Nagesh Gaonkar
PublicNext

PublicNext

26/10/2021 11:01 pm

Cinque Terre

65.06 K

Cinque Terre

0

ಸಂಬಂಧಿತ ಸುದ್ದಿ