ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೃದಯ ವಿದ್ರಾವಕ ಘಟನೆ: ನೀರು ತುಂಬಿದ್ದ ಬಕೆಟ್​ನಲ್ಲಿ ಬಿದ್ದು ಮಗು ಸಾವು

ಬೆಳಗಾವಿ: ನೀರು ತುಂಬಿದ್ದ ಬಕೆಟ್​ನಲ್ಲಿ ಬಿದ್ದು ಒಂದೂವರೆ ವರ್ಷದ ಕಂದಮ್ಮ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.

ತಾಂವಶಿ ಗ್ರಾಮದ ಸನದಿ ತೋಟದಲ್ಲಿ ವಾಸವಿರುವ ನಿಂಗಪ್ಪ ಮಸರಗುಪ್ಪಿ ಅವರ ಮಗ ವಿಜಯ ಮೃತ ದುರ್ದೈವಿ. ಮನೆಯ ಅಂಗಳದಲ್ಲಿ ಪಾತ್ರೆ ತೊಳೆಯಲು ನೀರಿಟ್ಟ ಬಕೆಟ್​ನಲ್ಲಿ ಪುಟಾಣಿ ವಿಜಯ ಆಟ ಆಡುತ್ತಾ ಬಿದ್ದು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಇತ್ತ ಮಗು ಕಾಣಿಸದಿದ್ದಾಗ ತಾಯಿ ಹುಡುಕಾಟ ನಡೆಸಿದ್ದಾರೆ. ಅಷ್ಟರಲ್ಲಿ ಮಗು ನೀರಿನ ಬಕೆಟ್​ನಲ್ಲಿ ಕುತ್ತಿಗೆವರೆಗೆ ಮುಳುಗಿ ಕಾಲುಗಳು ಮೇಲಕ್ಕೆ ಆಗಿದ್ದನ್ನು ಗಮನಿಸಿದ್ದಾರೆ. ಮನೆಯವರು ತಕ್ಷಣ ಹೊರಗೆ ತೆಗೆದು ನೋಡಿದಾಗ ಅಷ್ಟೊತ್ತಿಗೆ ಮಗು ತನ್ನ ಪ್ರಾಣ ಕಳೆದುಕೊಂಡಿತ್ತು. ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರ್ಘಟನೆಯು ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

Edited By : Vijay Kumar
PublicNext

PublicNext

26/10/2021 09:27 pm

Cinque Terre

34.33 K

Cinque Terre

2

ಸಂಬಂಧಿತ ಸುದ್ದಿ