ಬೆಂಗಳೂರು:ಕನ್ನಡ ಚಿತ್ರರಂಗದ ರೈಡರ್ ಚಿತ್ರದ ನಟಿ ಅನುಷಾ ಮೇಲೆ ಹಲ್ಲೆ ನಡೆದಿದೆ. ಪ್ರೀತಿಸಿದ ಹುಡುಗನೇ ಅನುಷಾ ಮೇಲೆ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಎರಡೇ ಎರಡು ತಿಂಗಳು ಪ್ರೀತಿಸಿದ್ದ ಈ ಇಬ್ಬ ರಿಗೂ 2015 ರಲ್ಲಿಯೇ ಬ್ರೇಕ್ ಅಪ್ ಆಗಿತಂತೆ.. ಆದರೆ, ಮೊನ್ನೆ 19 ರಂದು ಈ ಹಳೆ ಪ್ರೇಮಿ ನಟಿ ಅನುಷಾ ಮೇಲೆ ಹಲ್ಲೆ ನಡೆಸಿದ್ರಂತೆ. ಆದರೆ ಈಗ ಆ ಘಟನೆ ಬೆಳಕಿಗೆ ಬಂದಿದೆ.
ರೈಡರ್ ಚಿತ್ರದಲ್ಲಿ ಅಭಿನಯಿಸಿದ ನಟಿ ಅನುಷಾ ಮೇಲೇನೆ ಹಲ್ಲೆಯಾಗಿದೆ. ಹಲ್ಲೆ ಮಾಡಿದ ವ್ಯಕ್ತಿ ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದಾನೆ. ಮೊನ್ನೆ 19ರಂದು ಅನುಷಾ ಆಟೋದಲ್ಲಿ ಸ್ನೇಹಿತೆ ಜೊತೆಗೆ ತೆರಳುತಿದ್ದ ವೇಳೆ ಈ ಹಲ್ಲೆಯಾಗಿದೆ. ಹಲ್ಲೆ ಮಾಡಿದ ವ್ಯಕ್ತಿ ಬೇರೆ ಯಾರೋ ಅಲ್ಲ. 2015 ರಲ್ಲಿ ಅನುಷಾರನ್ನ ಪ್ರೀತಿಸುತ್ತಿದ್ದ ಚಂದನ್ ಪ್ರಸಾದ್ ಎನ್ನಲಾಗಿದೆ.
ಅನುಷಾ ಮತ್ತು ಚಂದನ್ ಪ್ರಸಾದ್ ಪರಸ್ಪರ ಎರಡೇ ಎರಡು ತಿಂಗಳು ಪ್ರೀತಿಸಿದ್ದರು. ಅಷ್ಟೇ. ಇದಾದ್ಮೇಲೆ ಬ್ರೇಕ್ ಅಪ್ ಆಗಿದೆ.
ಬ್ರೇಕ್ ಅಪ್ ಆದ್ಮೇಲೆ ದಿನವೂ ಚಂದನ್ ಪ್ರಸಾದ್ ಪೀಡಿಸುತ್ತಿದ್ದರಂತೆ. ಈಗ ನೋಡಿದ್ರೆ, ಚಂದನ್ ಪ್ರಸಾದ್ ಆಟೋದೊಳಗೆ ನುಗ್ಗಿ ಹಲ್ಲೆ ಮಾಡಿ ಬೈದಾಡಿದ್ದಾನೆ ಎಂದು ಆರೋಪಿಸಲಾಗಿದೆ. ಯಾರು ಹೇಳಿದರೂ ಕೇಳದೆ ಇದ್ದಾಗ ಪೊಲೀಸರಿಗೆ ತಿಳಿಸುವುದಾಗಿ ಹೇಳಿದ್ಮೇಲೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಚಂದನ್ ಪ್ರಸಾದ್. ಸದ್ಯ ಅನುಷಾ ಈ ಕುರಿತಾಗಿ ಅನ್ನಪೂರ್ಣೇಶ್ವರಿ ನಗರದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
PublicNext
26/10/2021 06:11 pm