ಭೋಪಾಲ್: ಅತ್ಯಾಚಾರ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಕಾಂಗ್ರೆಸ್ ಶಾಸಕನ ಪುತ್ರನನ್ನು ಮಧ್ಯ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಮುರುಳಿ ಮೊರ್ವಾಲ್ ಅವರ ಪುತ್ರ ಕರಣ್ ಮೊರ್ವಾಲ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಹೊರಿಸಿದ್ದರು. ಈ ಆರೋಪದ ನಂತರ ಮೊರ್ವಾಲ್ ನಾಪತ್ತೆಯಾಗಿದ್ದರು. ಮೊರ್ವಾಲ್‌ರನ್ನು ಹುಡುಕಿ ಕೊಟ್ಟವರಿಗೆ 25 ಸಾವಿರ ರೂ. ನೀಡುವುದಾಗಿ ಘೋಷಿಸಿದ್ದರು. ಇದೀಗ ಇಂದೋರ್ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಜ್ಯೋತಿ ಶರ್ಮ ಅವರು ಶಾಜಪುರ್ ಜಿಲ್ಲೆಯ ಮಕ್ಸಿ ಪಟ್ಟಣಕ್ಕೆ ತೆರಳಿ ಕರಣ್ ಮೊರ್ವಾಲ್ ಅವರನ್ನು ಬಂಧಿಸಿದ್ದಾರೆ.
ಕರಣ್ ಮಹಿಳೆಯೊಬ್ಬರನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ನಂತರ ಆತ ಮದುವೆಯಾಗಲು ನಿರಾಕರಿಸಿದ್ದ ಎಂದು ಮಹಿಳೆಯೊಬ್ಬರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯಚರಣೆ ಕೈಗೊಂಡಿದ್ದರು.
PublicNext
26/10/2021 05:39 pm