ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಇಬ್ಬರು ಭ್ರಷ್ಟ ಅಧಿಕಾರಿಗಳು ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಿಡಿಎ ಎಇಇ ಮಂಜುನಾಥ್ ಹಾಗೂ ಸರ್ವೇಯರ್ ಜಯರಾಮ್ ಎಸಿಬಿ ಬಲೆಗೆ ಬಿದ್ದ ಭ್ರಷ್ಟರು.
ಆರ್.ಟಿ ನಗರದಲ್ಲಿನ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ವೇಳೆ ಕಾಮಗಾರಿ ಸ್ಥಗಿತಕ್ಕಾಗಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಬಿಡಿಎ ಎಇಇ ಮಂಜುನಾಥ್ ಸೂಚನೆ ನೀಡಿದ್ದರು. ಬಳಿಕ ಕಟ್ಟಡ ಮಾಲೀಕರಿಗೆ ಸರ್ವೇಯರ್ ಜಯರಾಮ್ ಅವರನ್ನು ಸಂಪರ್ಕಿಸಲು ಹೇಳಿದ್ದಾರೆ. ಅದರಂತೆ ದೂರುದಾರರು ಜಯರಾಮ್‌ನನ್ನು ಸಂಪರ್ಕಿಸಿದಾಗ 5 ಲಕ್ಷ ರೂ.ಲಂಚಕ್ಕೆ ಡಿಮ್ಯಾಂಡ್ ಇಟ್ಟಿದ್ದಲ್ಲದೇ ಮುಂಗಡವಾಗಿ ಕಟ್ಟಡ ಮಾಲೀಕರಿಂದ 2 ಲಕ್ಷ ಲಂಚ ಸ್ವೀಕರಿಸಿದ್ದಾರೆ. ಇದೇ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚಕ್ಕೆ ಹೊಂಚು ಹಾಕಿದ್ದ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ಮಾಡಿ ಕ್ರಮ ಜರುಗಿಸಿದ್ದಾರೆ.
PublicNext
25/10/2021 10:14 pm