ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖದೀಮ ದಂಪತಿಗಳ ಹನಿಟ್ರ್ಯಾಪ್:300 ಜನಕ್ಕೆ ನಾಮ,ಗಳಿಸಿದ್ದು 20 ಕೋಟಿ

ಗಾಜಿಯಾಬಾದ್: ಇವರ ಟಾರ್ಗೆಟ್ ಕೇವಲ ಶ್ರೀಮಂತ ವ್ಯಕ್ತಿಗಳೇ. ಇವರ ಬಲಗೆ ಬೀಳೋರು ಅಂತಹ ಆಸಾಮಿಗಳೇ.ದೇಶದ ತುಂಬ ಒಟ್ಟು 300 ಜನಕ್ಕೆ ಮೋಸ ಮಾಡಿದ್ದಾರೆ. ಇದರಿಮದ ಗಳಿಸಿದ್ದು ಬರೋಬ್ಬರಿ 20 ಕೋಟಿ ರೂಪಾಯಿ. ಎಂತಹ ಟ್ರ್ಯಾಪ್ ಇದು ಅಂತೀರೋ. ಇದು ಚಾಲಾಕಿ ಗಂಡ-ಹೆಂಡತಿ ರಿಯಲ್ ಕಥೆ. ಬನ್ನಿ ಹೇಳ್ತೀವಿ.

ಖದೀಮ ಗಂಡನ ಹೆಸರು ಯೋಗೇಶ್ ಅಂತ.ಈತನ ಕೆಲಸ ದುಡ್ಡು ಇರೋರು ಯಾರು ? ಶ್ರೀಮಂತರ ಥರ ಕಾಣಿಸೋರು ಯಾರು ? ಇದನ್ನ ಸರ್ಚ್ ಮಾಡೋದೇ ಉದ್ಯೋಗ. ಪತಿಗೆ ಸಾಥ್ ಕೊಡುತ್ತಿದ್ದ ಪತ್ನಿ ಹೆಸರು ಸಪ್ನಾ ಗೌತಮ್. ಎಲ್ಲರಿಗೂ ಕಲರ್ ಕಲರ್ ಕನಸುಗಳನ್ನ ತೋರಿಸುತ್ತಿದ್ದ ಚಾಲಾಕಿ ಮಹಿಳೆ.ಸಾಮಾಜಿ ಜಾಲ ತಾಣದಲ್ಲಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ, ದುಡ್ಡಿರೋರನ್ನ ಬಲೆಗೆ ಬೀಳಿಸಿಕೊಳ್ಳೋದೇ ಈ ಲೇಡಿಯ ಹನಿ ಟ್ರ್ಯಾಪ್ ಕೆಲಸ. ಹಾಗಂತ ಎಲ್ಲವನ್ನೂ ಈ ಲೇಡಿ ಮಾಡುತ್ತಿರಲಿಲ್ಲ. 30 ಜನ ಹೆಣ್ಣುಮಕ್ಕಳೂ ಇದ್ದರು. ಅವರೂ ಗಾಜಿಯಾಬಾದ್ ನ ಈ ಖದೀಮ ದಂಪತಿಗಳಿಗೆ ಸಾಥ್ ಕೊಡುತ್ತಿದ್ದರು.

ದೇಶದ ತುಂಬೆಲ್ಲ ಇರೋ 300 ಕ್ಕೂ ಅಧಿಕ ಜನರನ್ನ ಯಾಮಾರಿಸಿದ್ದಾರೆ. ಅವರಿಂದ ಹಣವನ್ನೂ ಪೀಕಿಸಿದ್ದಾರೆ. ಮೋಸ ಮಾಡಿ ಒಂದೇ ವರ್ಷದಲ್ಲಿ ಸಂಗ್ರಹಿಸಿದ್ದ ಇವರ ಒಟ್ಟು ದುಡ್ಡು 20 ಕೋಟಿ.ಈಗ ಈ ದಂಪತಿ ಗಾಜಿಯಾಬಾದ್ ನ ಪೊಲೀಸರ ಅತಿಥಿಯಾಗಿದ್ದಾರೆ. ಆಗಲೇ ಈ ಮೇಲಿನ ಎಲ್ಲ ಸತ್ಯ ಹೊರ ಬಂದಿರೋದು. ಸೋ ಬಿ ಕೇರ್ ಫುಲ್.

Edited By :
PublicNext

PublicNext

25/10/2021 12:26 pm

Cinque Terre

26.73 K

Cinque Terre

1

ಸಂಬಂಧಿತ ಸುದ್ದಿ