ಚಿಕ್ಕೋಡಿ: ಡೆಡ್ಲಿ ಸೋಂಕು ಬ್ಲಾಕ್ ಫಂಗಸ್ ದಿಂದ ಪತ್ನಿ ಸಾವನ್ನಪ್ಪಿದ್ದರಿಂದ ಮನನೊಂದ ಪತಿ ತನ್ನ 4 ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.
ಗೋಪಾಲ ಹಾದಿಮನಿ (46), ಸೌಮ್ಯಾ ಹಾದಿಮನಿ (19), ಶ್ವೇತಾ ಹಾದಿಮನಿ( 16), ಸಾಕ್ಷಿ ಹಾದಿಮನಿ( 11), ಸೃಜನ ಹಾದಿಮನಿ( 8) ಮೃತ ದುರ್ದೈವಿಗಳು
ಜುಲೈ 6 ರಂದು ಗೋಪಾಲ್ ಪತ್ನಿ ಜಯಾ ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದರು, ಇದರಿಂದ ತೀವ್ರ ಕಿನ್ನತೆಗೆ ಒಳಗಾದ ಕುಟುಂಬದ ಸದಸ್ಯರೆಲ್ಲರೂ ಇಂತದೊಂದು ದುಡುಕು ನಿರ್ಧಾರದಿಂದ ಜೀವ ತೆತ್ತಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
PublicNext
23/10/2021 02:59 pm