ಚೆನ್ನೈ:ಮೂರು ತಿಂಗಳ ಮೊಮ್ಮಗನನ್ನೇ ಕೊಂದ ಅಜ್ಜಿ.ಚೆನ್ನೈನಲ್ಲಿ ನಡೆದಿದೆ ಈ ಘಟನೆ. ಅಜ್ಜಿ ಈಗ ಅರೆಸ್ಟ್. ಮಗುವನ್ನ ಕೊಂದ ಕಾರಣ ಏನ್ ಗೊತ್ತ ? ಹೇಳ್ತಿವಿ ನೋಡಿ.
ಕುಂದಂಪಾಳ್ಯಂ ಮೂಲದ ಐಶ್ವರ್ಯ ಹಾಗು ಭಾಸ್ಕರ್ ಅವರಿಗೆ ಅವಳಿ ಮಕ್ಕಳು ಜನಿಸಿವೆ. ಇವುಗಳನ್ನ ನೋಡಿಕೊಳ್ಳಲೆಂದೇ ಮಧುರೈಯಿಂದ ಶಾಂತಿ ಹೆಸರಿನ ಅಜ್ಜಿಯನ್ನ ಕರೆದುಕೊಂಡು ಬಂದಿದ್ದರು.ಆದರೆ ಮಕ್ಕಳ ತಾಯಿ ಐಶ್ವರ್ಯ ಮನೆಯಲ್ಲಿ ಇಲ್ಲದೇ ಇದ್ದಾಗ, ಗಂಡು ಮಗುವನ್ನ ಕೊಂದು ಹಾಕಿದ್ದಾಳೆ ಅಜ್ಜಿ.ಮತ್ತೊಂದು ಮಗುವನ್ನೂ ಕೊಲ್ಲಲು ಪ್ರಯತ್ನಿಸಿದ್ದಾಳೆ. ಪಕ್ಕದ ಮನೆಯವರು ಬಂದ ಕಾರಣ ಓಡಿ ಹೋಗಿದ್ದಾಳೆ. ಆದರೆ ಅಜ್ಜಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಅನ್ನೋದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
PublicNext
23/10/2021 07:46 am