ಬೆಂಗಳೂರು: ಇಲ್ಲಿಯ ಎಚ್.ಎಸ್.ಆರ್.ಲೇಔಟ್ ನಲ್ಲಿರೋ ಪಬ್ ನಲ್ಲಿ ಕುಡಿದ ಅಮಲಿನಲ್ಲಿ ಒಬ್ಬನ್ನೇ ಮೂರ್ನಾಲು ಜನ ಹಿಬ್ಬಮುಗ್ಗಾ ತಳಿಸಿದ ಘಟನೆ ನಡೆದಿದೆ. ಇದರಿಂದ ಏಟು ತಿಂದ ವ್ಯಕ್ತಿಗೆ ರಕ್ತ ಸುರಿಯೋ ಮಟ್ಟಕ್ಕೆ ಗಾಯವಾಗಿದೆ. ಈಗ ಅದೇ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪಬ್ ನಲ್ಲಿ ಪಾರ್ಟಿ ನಡೆಯುತ್ತಿತ್ತು. ಇದೇ ವೇಳೆ ಎಣ್ಣೆ ಏಟಿನಲ್ಲಿಯೇ ಉದ್ಯಮಿ ರಾಹುಲ್ ರಾಜೇಶ್ ಮತ್ತು ಆತನ ಸ್ನೇಹಿತು ಸೂರ್ಯಕಾಂತ್ ಜೊತೆಗೆ ಕಿತ್ತಾಡಿದ್ದಾರೆ. ಬಳಿಕ ಸೂರ್ಯಕಾಂತ್ ಮೇಲೆ ಗಂಭೀರ ಗಾಯವಾಗೋ ರೀತಿಯಲ್ಲಿಯೇ ಹಲ್ಲೆ ಮಾಡಿದ್ದಾರೆ. ರಕ್ತಸಿಕ್ತಗೊಂಡ ಸೂರ್ಯಕಾಂತ್ ಇರೋ ವೀಡಿಯೋ ಈಗ ವೈರಲ್ ಆಗಿದೆ. ಎಚ್.ಎಸ್.ಆರ್.ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ರಾಹುಲ್ ರಾಜೀವ್,ಯುವರಾಜ್ ಮತ್ತು ರಾಜೇಶ್ ನನ್ನ ಬಂಧಿಸಿದ್ದಾರೆ.
PublicNext
22/10/2021 06:07 pm