ಬಾಂಗ್ಲಾದೇಶ: ಇಲ್ಲಿ ಜನಾಂಗೀಯ ದಳ್ಳುರಿ ಧಗ..ಧಗನೆ ಉರಿಯುತ್ತಿದೆ. ಮೊನ್ನೆ ದುರ್ಗಾ ಪೂಜೆಯ ಹಿಂದಿನ ದಿನ ನೋಖಾಲಿಯಲ್ಲಿ ಒಬ್ಬ ವ್ಯಕ್ತಿಯನ್ನ, ಯುವಕರಿಬ್ಬರು ಓಣಿಯೊಂದರಲ್ಲಿ ಅಟ್ಟಾಡಿಸಿ ಕೊಲೆಗೈದಿದ್ದಾರೆ. ಆ ದೃಶ್ಯ ಭೀಕರವಾಗಿದೆ.
ಬಾಂಗ್ಲಾ ದೇಶದ ಮುಸ್ಲಿಂ ಜನಕ್ಕೆ ಅದೇನ್ ಆಗಿದಿಯೋ ಏನೋ.ಹಿಂದುಗಳನ್ನ ಕಂಡ್ರೆ ಕೆಂಡಗಾರುತ್ತಿದ್ದಾರೆ. ದುರ್ಗಾ ಪೂಜೆ ಕೊನೆ ದಿನವೂ ಹಿಂದುಗಳಿಗೆ ಕಾರ್ ಡಿಕ್ಕಿ ಹೊಡೆಸಿದ್ದಾರೆ. ಹಿಂದಿನ ದಿನವಂತೂ ಜತಿನ್ ಸಾಹಾ ಅನ್ನೋ ಕೋಮಿಲ್ಲಾದ ನಿವಾಸಿಯನ್ನ ಬರ್ಬರವಾಗಿಯೇ ನೋಖಾಲಿಯಲ್ಲಿ ಹತ್ಯೆ ಮಾಡಲಾಗಿದೆ. ದುರಂತ ನೋಡಿ ಹತ್ಯೆ ಮಾಡೋದನ್ನ ಅದ್ಯಾರೋ ಚಿತ್ರೀಕರಿಸಿಯೂ ಬಿಟ್ಟಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದಲ್ಲೂ ಹರಿ ಬಿಟ್ಟಿದ್ದಾರೆ. ಇದನ್ನ ನೋಡಿದ್ರೆ ನಿಜಕ್ಕೂ ಸಾವು ಇಷ್ಟು ಭಯಂಕರವಾಗಿ ಇರುತ್ತದೆಯೆ ಅನಿಸಿಬಿಡುತ್ತದೆ. ಇಬ್ಬರೇ ಇಬ್ಬರು ಯುವಕರು ಕತ್ತಿಯಿಂದ ಕೊಂದು ಹಾಕುತ್ತಾರೆ. ವೀಡಿಯೋ ನೋಡಿದವ್ರು ಏನ್ ಕಾಲ ಬಂತಪ್ಪ ಅನ್ನುತ್ತಿದ್ದಾರೆ.
PublicNext
19/10/2021 09:23 pm