ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಗೋವಿಂದಪುರ ಠಾಣೆ ಪಿಎಸ್‌ಐ ಸಸ್ಪೆಂಡ್: 5 ಲಕ್ಷ ರೂ. ಲಂಚ ಆರೋಪ

ಬೆಂಗಳೂರು: ಖೋಟಾ ನೋಟ್ ಕೇಸ್ ನಲ್ಲಿ 5 ಲಕ್ಷ ಲಂಚ ಪಡೆದ ಆರೋಪ ಮೇಲೆ ಬೆಂಗಳೂರು ನಗರದ ಗೋವಿಂದಪುರ ಠಾಣೆಯ ಪಿಎಸ್‌ಐ ಮಹಮ್ಮದ್ ಇಮ್ರಾನ್ ಅಲಿ ಅವರನ್ನು ಅಮಾನತು ಮಾಡಲಾಗಿದೆ.

ಅವರ ಮೇಲಿನ ಈ ಆರೋಪದ ಬಗ್ಗೆ ಇಲಾಖಾವಾರು ತನಿಖೆ ಆಗಿತ್ತು. ತನಿಖೆ ನಡೆಸಿದ್ದ ಎಸಿಪಿ, ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರಿಗೆ ವರದಿ ಸಲ್ಲಿಸಿದ್ದರು. ವರದಿ ಸ್ವೀಕರಿಸಿದ ಡಿಸಿಪಿ ಶರಣಪ್ಪ, ಪಿಎಸ್‌ಐ ಮಹಮ್ಮದ್ ಇಮ್ರಾನ್ ಅಲಿ ಅವರನ್ನು ಅಮಾನತು ಮಾಡಿದ್ದಾರೆ.

ಎಸಿಪಿ ವಿಚಾರಣೆ ವೇಳೆ ಪಿಎಸ್ ಐ ಇಮ್ರಾನ್, ಪ್ರಕರಣವೊಮದರಲ್ಲಿ ಲಂಚ ಪಡೆದಿದ್ದು ಸಾಬೀತಾಗಿದೆ. ಆರೋಪಿಗಳಿಗೆ ಅನುಕೂಲ ಮಾಡಿಕೊಡಲು ಗೋವಿಂದಪುರ ಇನ್ಸ್ಪೆಕ್ಟರ್ ಪ್ರಕಾಶ್‌ಗೆ ಗೊತ್ತಿಲ್ಲದಂತೆ ಪಿಎಸ್‌ಐ ಇಮ್ರಾನ್ ಅಲಿ ಲಂಚ ಪಡೆದು ಡೀಲ್ ಮುಗಿಸಿದ್ದರು ಎಂದು ವರದಿ ಸಲ್ಲಿಸಲಾಗಿದೆ.

Edited By : Nagaraj Tulugeri
PublicNext

PublicNext

19/10/2021 03:29 pm

Cinque Terre

39.37 K

Cinque Terre

12

ಸಂಬಂಧಿತ ಸುದ್ದಿ