ಬೆಳಗಾವಿ: ಅನ್ಯಕೋಮಿನ ಯುವತಿಯರ ಜೊತೆ ಮಾತನಾಡುತ್ತಿದ್ದ ಹಿಂದೂ ಯುವಕನ ಮೇಲೆ ಆಟೋ ಚಾಲಕರು ಹಲ್ಲೆ ಮಾಡಿದ್ದಾರೆ. ಈ ಘಟನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಡೆದಿದೆ. ಯುವತಿಯರು ಲೋಂಡಾ ಮೂಲದವರು ಎನ್ನಲಾಗಿದೆ.
ಮುಸ್ಲಿಂ ಯುವತಿಯರೊಂದಿಗೆ ಹಿಂದೂ ಯುವಕ ನಿಂತಿದ್ದನ್ನು ಗಮನಿಸಿದ ಸ್ಥಳೀಯ ಆಟೋ ಚಾಲಕರು ತಗಾದೆ ತೆಗೆದಿದ್ದಾರೆ. ಯುವಕನನ್ನು ಪಕ್ಕಕ್ಕೆ ಎಳೆದೊಯ್ದು ಯುವತಿಯರು ಹಾಕಿದ್ದ ಬುರ್ಖಾ ಬಿಚ್ಚಿಸಿ ಫೋಟೊ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ . ಈ ಸಂಬಂಧ ಯುವತಿಯರು ಹಾಗೂ ಯುವಕ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
19/10/2021 01:52 pm