ಚಿತ್ರದುರ್ಗ: ಹಳೆಯ ದ್ವೇಷಕ್ಕಾಗಿ ಆಟೋ ಚಾಲಕನ ಮೇಲೆ ಪುಂಡರ ಗುಂಪೊಂದು ಹಿಗ್ಗಾಮುಗ್ಗಾ ಹಲ್ಲೆ ಮಾಡಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಆಟೋ ಹಿಂಬಾಲಿಸಿಕೊಂಡು ಬಂದ ಹಲ್ಲೆಕೋರರು ನಂತರ ಸರ್ಕಾರಿ ಶಾಲೆ ಮೈದಾನವೊಂದರಲ್ಲಿ ಹಲ್ಲೆ ಮಾಡಿದ್ದಾರೆ.
ಆಟೋ ಚಾಲಕ ಭೀಮಣ್ಣ ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ಕ್ಷುಲ್ಲಕ ಕಾರಣಕ್ಕೆ ಮನ ಬಂದಂತೆ ಹಲ್ಲೆ ಮಾಡಲಾಗಿದೆ. ಅಜಯ್ ಹಾಗೂ ಆತನ ಗ್ಯಾಂಗ್ ಈ ಪ್ರಕರಣದಲ್ಲಿ ಭಾಗಿಯಾಗಿದೆ. ದಸರಾ ಹಬ್ಬದಂದು ಹಲ್ಲೆ ಮಾಡಿದ ಹಲ್ಲೆಕೋರರು ಒಟ್ಟಾರೆ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದರು. ನಂತರ ಹಲ್ಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳಾದ ಅಜಯ್, ಕೃಷ್ಣ, ವರುಣ್, ಸುಪ್ರೀತ್ ಹಾಗೂ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಆಟೋ ಚಾಲಕ ಭೀಮಣ್ಣ ಗಂಭೀರವಾಗಿ ಗಾಯಗೊಂಡು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
19/10/2021 12:38 pm